ಮಂಜೇಶ್ವರ: ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಮೀಂಜ ಸಂತಡ್ಕ ನಿವಾಸಿ ಮುಹ್ಮದ್ ಯಾನೆ ಮುನ್ನ (21) ಎಂಬಾಥನನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕದ ಗದಗ ಲಕ್ಷ್ಮೇಶ್ವರ ತಾಲೂಕಿನ ಬಳಿಹೊಸು ನಿವಾಸಿ ಹಾಗೂ ಕಾಸರಗೋಡಿನ ನುಳ್ಳಿಪಾಡಿ ಕ್ವಾರ್ಟರ್ಸಿನಲ್ಲಿ ವಾಸಿಸುವ ಎಂ.ಎಲ್. ಸಂತೋಷ್ ಅವರ ಬೈಕ್ ರಾಷ್ಟ್ರೀಯ ಹೆದ್ದಾರಿ ಉಪ್ಪಳದಲ್ಲಿ ಇತ್ತೀಚೆಗೆ ಅಪಘಾತಕ್ಕೀಡಾಗಿದ್ದು, ನಂತರ ಬೈಕನ್ನು ರಸ್ತೆ ಅಂಚಿಗೆ ನಿಲ್ಲಿಸಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದರು. ಮತ್ತೆ ಬೈಕ್ ಕೊಂಡೊಯ್ಯಲು ಸಂತೋಷ್ ಅಗಮಿಸಿದಾಗ ಅಲ್ಲಿದ್ದ ಬೈಕ್ ನಾಪತ್ತೆಯಾಗಿತ್ತು. ಸಂತೋಷ್ ನೀಡಿದ ದೂರಿನನ್ವಯ ರಸ್ತೆ ಅಂಚಿನ ಸಿಸಿ ಕ್ಯಾಮರಾ ದೃಶ್ಯಾವಳಿ ತಪಸಣೆಯೊಂದಿಗೆ ಅರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಮಹಮ್ಮದ್ ವಿರುದ್ಧ ಮಂಜೇಶ್ವರ ಠಾಣೆಯಲ್ಲಿ ಪೋಕ್ಸೋ ಕೇಸು ಮತ್ತು ಬೇಕಲ ಠಾಣೆಯಲ್ಲಿ ಕಳವು ಕೃತ್ಯದ ಬಗ್ಗೆ ಕೇಸುಗಳಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ.

