HEALTH TIPS

ಹಿರಿಯ ವಿಜ್ಞಾನಿ ಡಾ. ರಾಮ ಬಿ. ಭಟ್ ನಿಧನ

ಕುಂಬಳೆ: ಜಿಲ್ಲೆಯ ಧರ್ಮತ್ತಡ್ಕ ನಿವಾಸಿ, ವಿಜ್ಞಾನಿಯಾಗಿ ವಿಶ್ವಖ್ಯಾತಿ ಗಳಿಸಿದ   ಡಾ. ರಾಮ ಬಿ. ಭಟ್ (83)ವಯೋಸಹಜ ಅಸೌಖ್ಯದಿಂದ ಕೆನಡಾದ ಟೊರೆಂಟೋದಲ್ಲಿ  ಭಾನುವಾರ ನಿಧನರಾದರು.  


ಸುರತ್ಕಲ್ ಕೆ.ಆರ್.ಇ.ಸಿ.ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‍ನಲ್ಲಿ ಬಿ.ಇ ಪದವಿ,  ಮದರಾಸಿನ ಐ.ಐ.ಟಿ.ನಲ್ಲಿ ಎಂ.ಟೆಕ್ ಮತ್ತು 'ನಾದ-ಕಂಪನ'ವಿಷಯದಲ್ಲಿ ಡಾಕ್ಟರೇಟ್ ಪದವಿಪಡೆದಿದ್ದರು.  ನಂತರ ತಿರುವನಂತಪುರಂ ಸಮಿಪದ ತುಂಬಾ ರಾಕೆಟ್ ಸೆಂಟರ್, ಅಮೆರಿಕಾದ 'ನಾಸಾ'ದಲ್ಲೂ ಅಲ್ಪ ಕಾಲ ಸೇವೆ ಸಲ್ಲಿಸಿ  1980ರಲ್ಲಿ ಕೆನಡಾದ ಮಾಂಟ್ರಿಯಲ್ ನ ಕಾಂಕಾರ್ಡಿಯಾ ಯುನಿವರ್ಸಿಟಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಡೀನ್‍ಆಗಿ  ಸೇವೆ ಮುಮದುವರಿಸಿದ್ದರು. 

ನೂರಾರು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ, ಹಲವಾರು ಅಂತಾರಾಷ್ಟ್ರೀಯ ವಿಜ್ಞಾನ ಸಮ್ಮೇಳನಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಭಾಗವಹಿಸಿದ್ದರು.  'ನಾದ ಮತ್ತು ಕಂಪನ' ವಿಷಯದಲ್ಲಿ ಇವರು ಬರೆದ ಇನ್ನೂರಕ್ಕೂ ಹೆಚ್ಚಿನ ಸಂಶೋಧನಾ ಪ್ರಬಂಧಗಳು ಅಂತರ್ರಾಷ್ಟ್ರೀಯ ಜರ್ನಲ್‍ಗಳಲ್ಲಿ ಪ್ರಕಟವಾಗಿವೆ.

ವಿಜ್ಞಾನದ ಜತೆಗೆ  ಬಾಳಿಕೆ ರಾಮ ಭಟ್ ಎಂಬ ಹೆಸರಿನಲ್ಲಿ  ಸಾಹಿತಿಯಾಗಿಯೂ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವರ ಹಲವು ಕವನ ಸಂಕಲನ ಪ್ರಕಟಗೊಂಡಿದೆ.ಇವರು ಧರ್ಮತ್ತಡ್ಕ ಶ್ರೀದುರ್ಗಾಪರಮೇಶ್ವರಿ ವಿದ್ಯಾ ಸಂಸ್ಥೆಯ ಹಳೇ ವಿದ್ಯಾರ್ಥಿಯಾಗಿದ್ದರು. ಡಾ. ರಾಮ ಬಿ. ಭಟ್ ಅವರು ಪತ್ನಿ ಪಾರ್ವತಿ, ಪುತ್ರಿಯರಾದ  ಡಾ.ಮಮತಾ ಭಟ್ ಮತ್ತು ಡಾ.ಅಪರ್ಣಾ ಭಟ್ ಅವರನ್ನು ಅಗಲಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries