ಕುಂಬಳೆ: ಬದ್ರಿಯಾನಗರದ ಇಮಾಂಶಾಫಿ ಅಕಾಡೆಮಿ ಸಮೀಪದ ಹುಸೈನ್ ಕುಞÂ ಎಂಬವರ ಮನೆಗೆ ಬೆಂಕಿ ತಗುಲಿದ್ದು, ಮನೆಯೊಂದಕ್ಕೆ ಬೆಂಕಿ ತಗಲಿದ್ದು, ಅಗ್ನಿಶಾಮಕ ದಳದ ಸಕಾಲಿಕ ಕಾರ್ಯಾಚರಣೆಯಿಂದ ಹೆಚ್ಚಿನ ದುರಂತ ತಪ್ಪಿದೆ. ಮನೆಯ ಹೊರಭಾಗದಲ್ಲಿರುವ ಅಡುಗೆ ಕೋಣೆಯ ಒಲೆಯಿಂದ ಬೆಂಕಿ ವ್ಯಾಪಿಸಿದ್ದು, ಮನೆಯೊಳಗಿದ್ದ ಗ್ರೈಂಡರ್, ಮಿಕ್ಸಿ ಸೇರಿದಂತೆ ವಿವಿಧ ವಿದ್ಯುತ್ ಸಲಕರಣೆಗಳು, ಇತರ ಸಾಮಗ್ರಿಗಳು ಹಾನಿಗೀಡಾಗಿದೆ. ಮನೆಯೊಳಗಿದ್ದವರು ಹೊರಕ್ಕೆ ಓಡಿ ಪರಾರಿಯಾಗಿರುವುದರಿಂದ ಪ್ರಾಣಾಪಾಯ ತಪ್ಪಿದೆ.

