ಮಂಜೇಶ್ವರ: ಜಾನುವಾರುಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನವನ್ನು ತಡೆದು ನಿಲ್ಲಿಸಿ ಅದರೊಳಗಿದ್ದವರಿಗೆ ಬೆದರಿಕೆಯೊಡ್ಡಿದ ಆರೋಪದನ್ವಯ ಇಬ್ಬರನ್ನು ಮಂಜೇಶ್ವರ ಠಾಣೆ ಪೆÇಲೀಸರು ಬಂಧಿಸಿ, ನಂತರ ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದಾರೆ.
ಪೈವಳಿಕೆ ಆವಳ ನಿವಾಸಿ ಇಬ್ರಾಹಿಂ ಖಲೀಲ್ ನೀಡಿದ ದೂರಿನನ್ವಯ ಕರೋಪಾಡಿ ಪದ್ಮಾಣ ನಿವಾಸಿ ಪುನೀತ್ ಕುಮಾರ್ (22), ಚೆಪ್ಪಾರು ನೆತ್ತರಗುಳಿ ನಿವಾಸಿ ಸುದೀಪ್ (24)ಬಂಧಿತರು. ಶನಿವಾರ ರಾತ್ರಿ 9ಕ್ಕೆ ಬಾಯಾರು ಕಲ್ಲಗುಡ್ಡೆಯಲ್ಲಿ ಘಟನೆ ನಡೆದಿದೆ. ಜಾನುವಾರುಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನವನ್ನು ತಡೆದು ನಿಲ್ಲಿಸಿ ಬೆದರಿಕೆಯೊಡ್ಡಿರುವುದಾಗಿ ಇಬ್ರಾಹಿಂ ಖಲೀಲ್ ಆರೋಪಿಸಿದ್ದರು.
ಇದೇ ವೇಳೆ ಕರೋಪಾಡಿ ಪದ್ಮಾಣದ ಪುನೀತ್ ಕುಮಾರ್ ನೀಡಿದ ಪ್ರತಿದೂರಿನನ್ವಯ ಬಾಯಾರಿನ ಇಬ್ರಾಹಿಂ ಖಲೀಲ್ ವಿರುದ್ಧವೂ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಜಾನುವಾರುಗಳನ್ನು ಅನಧಿಕೃತವಾಗಿ ಸಾಗಿಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ವಾಹನ ತಡೆದು ವಿಚಾರಿಸುತ್ತಿದ್ದಂತೆ ಇಬ್ರಾಹಿಂ ಖಲೀಲ್ ತನ್ನ ಅಂಗಿ ಕೊರಳಪಟ್ಟಿ ಹಿಡಿದು ಥಳಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

