ಕಾಸರಗೋಡು: ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಿಸಲಾದ್ದ ಮಹಿಳೆಯ ಮೊಬೈಲ್ ಫೆÇೀನ್ ಕಳವುಗೈದ ಪ್ರಕರಣದ ಆರೋಪಿಯನ್ನು ಕಾಸರಗೋಡು ನಗರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಚೆರ್ಕಳದ ಕ್ವಾರ್ಟರ್ಸ್‍ವೊಂದರಲ್ಲಿ ವಾಸಿಸುತ್ತಿರುವ ಮೂಲತಃ ಮುಟ್ಟತ್ತೋಡಿ ತೈವಳಪ್ಪು ನಿವಾಸಿ ಅಜ್ಮಲ್ ಫಿರೋಸ್(23)ಬಂಧಿತ.
ಚಿಕಿತ್ಸೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಮಹಿಳಾ ವಾರ್ಡ್‍ನಲ್ಲಿ ಮೇ 5ರಂದು ದಾಖಲಾಗಿದ್ದ ಬೋವಿಕ್ಕಾನ ನಿವಾಸಿ ರಮ್ಯಾ ಎಂಬವರ 70ಸಾವಿರ ರೂ. ಮೌಲ್ಯದ ಮೊಬೈಲ್ ಪೋನ್ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಸಲ್ಲಿಸಿದ ದೂರಿನನ್ವಯ ಈ ಬಂಧನ ನಡೆದಿದೆ.

