ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಕಡಂಬಾರು ಮಜಿಬೈಲು ಕುಂಬೆತ್ತಲ ಶ್ರೀ ಕೊರಗಜ್ಜ ದೈವಸ್ಥಾನ ಸಮೀಪದ ಹಿತ್ತಿಲೊಂದರಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೆÇಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ. ದ.ಕ. ಜಿಲ್ಲೆಯ ಪುತ್ತೂರು ಬಜತ್ತೂರು ನಿವಾಸಿ ಲಿಂಗಪ್ಪ ಗೌಡ (70), ಮಜಿಬೈಲಿನ ಸುರೇಶ್ ಶೆಟ್ಟಿ (32), ಕದ್ರಿ ಬಜೆ ಕಾಪಿಕ್ಕಾಡ್‍ನ ಜಯರಾಜ್ (38), ಪುತ್ತೂರು ನೆಕ್ಕಿಲಾಡಿಯ ಜೋಸಿ ಮನೋಜ್ ಲೋಬೋ(50)ಬಂಧಿತರು. ಬಂಧಿತರಿಂದ 3 ಕೋಳಿಗಳು ಹಾಗೂ 43,030 ರೂಪಾಯಿ ನಗದು ವಶಪಡಿಸಲಾಗಿದೆ.

