HEALTH TIPS

ಪೆರ್ಲ ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ 'ಶನಿ ನಮನ-ತಾಪ ಶಮನ ವಿಶಿಷ್ಟ ಕಾರ್ಯಕ್ರಮ ಸಂಪನ್ನ

ಪೆರ್ಲ: ಪೆರ್ಲ ಸನಿಹದ ಬಜಕೂಡ್ಲು ಅಮೃತಧಾರಾ ಗೋಶಾಲೆ, ಗೋಲೋಕದಲ್ಲಿ ವಿಶಿಷ್ಟ ಕಾರ್ಯಕ್ರಮ  'ಶನಿ ನಮನ-ತಾಪ ಶಮನ' (ಶನಿಜಯಂತಿಯ ಪುಣ್ಯಪರ್ವ)ಕಾರ್ಯಕ್ರಮ ಭಾನುವಾರ ಸಂಪನ್ನಗೊಂಡಿತು.


ಶಂಕರಾಚಾರ್ಯ  ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ  ದಿವ್ಯಾಶೀರ್ವಾದ ಹಾಗೂ ಮಾರ್ಗದರ್ಶನದೊಂದಿಗೆ ಈ ಅಪೂರ್ವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.   ಶನಿವಾರ  ಬೆಳಗ್ಗೆ 4.30ಕ್ಕೆ ಗುರು ವಂದನೆ, ದೇವತಾ ಪ್ರಾರ್ಥನೆ, ಸ್ನಾನ, ಸಂಕಲ್ಪ, ಗೋಪೂಜೆ  ಶ್ರೀ ಮಹಾಗಣಪತಿ ಹವನದೊಂದಿಗೆ ಆರಂಭಗೊಂಡ ಶ್ರೀಮಹಾಗಣಪತ್ಯಥರ್ವಶೀರ್ಷ ಅಖಂಡ ಪಾರಾಯಣಕ್ಕೆ ಭಾನುವಾರ ಬೆಳಗ್ಗೆ ಮಂಗಲ ಹಾಗೂ ಚತುದ್ರ್ರವ್ಯಾತ್ಮಕ ಶ್ರೀಮಹಾಗಣಪತ್ಯಥರ್ವಶ್ರೀರ್ಷ ಹವನದೊಂದಿಗೆ ಸಂಪನ್ನಗೊಂಡಿತು. 

ಶನಿವಾರ ಸುರಿದ ಬಿರುಸಿನ ಮಳೆಯನ್ನೂ ಲೆಕ್ಕಿಸದೆ ಸಹಸ್ರಾರು ಸಂಖ್ಯೆಯಲ್ಲಿ ಗೋಪ್ರೇಮಿಗಳು ಹಾಗೂ ಭಕ್ತಾದಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಗೋಗ್ರಾಸ ಸೇವೆ, ಶನಿಕಲ್ಪೋಕ್ತ ಪೂಜೆ ಸಂಕಲ್ಪ, ಗೋಪೂಜೆ, ಶನಿಶಾಂತಿ ಹವನ ಸಂಕಲ್ಪ, ಅಥರ್ವಶೀರ್ಷಹವನ ಸಂಕಲ್ಪ, ಸರ್ವಸೇವೆಯಲ್ಲಿ ಭಕ್ತಾದಿಗಳು ತಮ್ಮನ್ನು ತೊಡಗಿಸಿಕೊಂಡಿದ್ದರು.   ಶ್ರೀ ಸಂಸ್ಥಾನ ಗೋಕರ್ಣದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ  ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries