ಕಾಸರಗೋಡು: ರಂಗ ಶಂಕರ ಬೆಂಗಳೂರು ವತಿಯಿಂದ ಮೇ 21 ರಿಂದ 24 ವರೆಗೆ ಕಾಸರಗೋಡು ಪಿಲಿಕುಂಜೆ ಮುನಿಸಿಪಲ್ ಟೌನ್ ಹಾಲಿನಲ್ಲಿ ಕನ್ನಡ ನಾಟಕೋತ್ಸವ ನಡೆಯಲಿರುವುದು. ಎಲ್ಲಾ ದಿನಗಳಲ್ಲಿ ಸಂಜೆ 6.30ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ. ಮೇ 21ರಂದು ಶುನಶ್ಶೇಪ,22ರಂದು ಬಹುಮುಖಿ,23ರಂದು ನಕ್ಷತ್ರ ಯಾತ್ರಿಕರು,24ರಂದು ಬೆರಳ್ಗೆ ಕೊರಳ್ ಸೇರಿದಂತೆ ನಾಲ್ಕು ನಾಟಕಗಳು ಪ್ರದರ್ಶನಗೊಳ್ಳಲಿದೆ. ನಾಟಕೋತ್ಸವದ ಅಂಗವಾಗಿ ಸಂಜೆ 5ರಿಂದ ರಂಗ ಗೀತೆ,ಏಕ ಪಾತ್ರಾಭಿನಯ ಸ್ಪರ್ಧೆಗಳನ್ನು ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ಏರ್ಪಡಿಸಲಾಗಿದೆ.ಈ ಸ್ಪರ್ಧೆಗಳಲ್ಲಿ ಎಲ್ಲರಿಗೂ ಭಾಗವಹಿಸಬಹುದಾಗಿದೆ. ಕಾಸರಗೋಡಿನ ಪ್ರಮುಖ ಸಾಂಸ್ಕøತಿಕ ಸಂಘಟನೆಗಳಾ ಥಿಯೇಟ್ರಿಕ್ ಕಾಸರಗೋಡು ಮತ್ತು 'ಸವಾಕ್' ನೇತೃತ್ವದಲ್ಲಿ ರಂಗ ಶಂಕರ ಬೆಂಗಳೂರು ಈ ನಾಟಕೋತ್ಸವ ಆಯೋಜಿಸುತ್ತಿದೆ. ರಾಷ್ಟ್ರೀಯ ಸಾಂಸ್ಕೃತಿಕ ನಾಟಕದ ಪ್ರಮುಖ ರಾಯಭಾರಿಗಳು ನಾಟಕೋತ್ಸವದಲ್ಲಿ ಭಾಗವಹಿಸುವರು.

