HEALTH TIPS

ಅನಂತಪುರ ಕೈಗಾರಿಕಾ ಕೇಂದ್ರ ಪರಿಸರ ಮಲಿನೀಕರಣಕ್ಕೆ ತುರ್ತು ಪರಿಹಾರ ಉಂಟಾಗಬೇಕು- ಬಿಜೆಪಿ

ಕುಂಬಳೆ: ಅನಂತಪುರ ಇಂಡಸ್ಟ್ರಿಯಲ್ ಏರಿಯ ಪರಿಸರದ ಮಲಿನೀಕರಣ, ದುರ್ವಾಸನೆಗೆ ತುರ್ತು ಪರಿಹಾರ ಉಂಟಾಗಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆಗ್ರಹಿಸಿದ್ದಾರೆ. ಬಿಜೆಪಿ ಮುಖಂಡರು ಹಾಗೂ ಸ್ಥಳೀಯರ ಜೊತೆ ಕೈಗಾರಿಕಾ ಪ್ರಾಂಗಣದ ವಿವಿಧ ಸಂಸ್ಥೆಗಳನ್ನು ಸಂದರ್ಶಿಸಿದ ಬಳಿಕ ಅವರು ಮಾತನಾಡುತ್ತಿದ್ದರು. 

ಕೈಗಾರಿಕೀಕರಣ ಜನರ ಆರ್ಥಿಕ ಪ್ರಗತಿಗೆ ಅನಿವಾರ್ಯವಾಗಿದೆ. ಆದರೆ ಜನರ ಆರೋಗ್ಯಕ್ಕೆ ಹಾನಿ ಉಂಟಾಗುವ, ಜಲಮೂಲಗಳು, ವಾತಾವರಣ ಮಲೀನಗೊಳ್ಳುವಂತಹ ಕೈಗಾರಿಕೆಗಳನ್ನು ತೊರೆಯಲು ಕೈಗಾರಿಕಾ ಇಲಾಖೆ ಸಿದ್ಧವಾಗಬೇಕು ಎಂದು ಅವರು ಆಗ್ರಹಿಸಿದರು. ಕಾರ್ಯದರ್ಶಿ ಪಿ.ಆರ್. ಸುನಿಲ್, ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ಉಪಾಧ್ಯಕ್ಷ ವಿಕ್ರಮ್ ಪೈ, ಮಂಡಲ ಕಾರ್ಯದರ್ಶಿ ಪ್ರದೀಪ್ ಕುಮಾರ್, ವಿನೋದ್ ಕೊಯಿಪ್ಪಾಡಿ, ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ, ಅಜಯ್ ನಾಯ್ಕಾಪು, ಪಂಚಾಯತಿ ಜನ ಪ್ರತಿನಿಧಿಗಳು ಜೊತೆಗಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries