HEALTH TIPS

ಅಣ್ವಸ್ತ್ರ ಕ್ಷಿಪಣಿ ನೆಲೆಯನ್ನು ವಿಸ್ತರಿಸುತ್ತಿರುವ ಚೀನಾ : ಉಪಗ್ರಹ ಚಿತ್ರಗಳಿಂದ ಬಹಿರಂಗ

ಬೀಜಿಂಗ್: ಚೀನಾವು ತನ್ನ ಅಣ್ವಸ್ತ್ರ ಕ್ಷಿಪಣಿ ನೆಲೆಗಳ ಸಮೀಪ ಬೃಹತ್ ಗಾತ್ರದ ಮಿಲಿಟರಿ ಸಂಕೀರ್ಣವನ್ನು ನಿರ್ಮಿಸುತ್ತಿರುವುದು ಉಪಗ್ರಹ ಛಾಯಾಚಿತ್ರಗಳ ಮೂಲಕ ಬಹಿರಂಗಗೊಂಡಿವೆ. ಈ ಸಂಕೀರ್ಣವು 80ಕ್ಕೂ ಅಧಿಕ ಕಾಂಕ್ರೀಟ್‌ನಿಂದ ನಿರ್ಮಿತವಾದ ಲಾಂಚ್‌ಪ್ಯಾಡ್ (ಉಡಾವಣೆ ತಾಣ) ಹಾಗೂ ಮೂರು ಬೃಹತ್ ಗಾತ್ರದ ಅಷ್ಟಭುಜಾಕೃತಿಯ ಕಮಾಂಡ್ ಸೆಂಟರ್ ಕಟ್ಟಡಗಳನ್ನು ಹೊಂದಿದೆ ಎಂದು ರಾಯ್ಟರ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಚೀನಾ ತನ್ನ ಅಣ್ವಸ್ತ್ರ ಕ್ಷಿಪಣಿ ಪಡೆಗೆ ಪೂರಕವಾದ ಮೂಲ ಸೌಕರ್ಯಗಳನ್ನು ಗಣನೀಯವಾಗಿ ಬಲಪಡಿಸುತ್ತಿರುವುದನ್ನು ಈ ಉಪಗ್ರಹ ಚಿತ್ರಗಳು ತೋರಿಸಿಕೊಟ್ಟಿವೆ ಎಂದು ಅಮೆರಿಕ ವಿಜ್ಞಾನಿಗಳ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳ ತಜ್ಞರು ಅಭಿಪ್ರಾಯಿಸಿದ್ದಾರೆ.

ಚೀನಾದ ಕ್ಸಿನ್‌ಜಿಯಾಂಗ್ ಹಾಗೂ ಘಾನ್ಸು ಪ್ರಾಂತಗಳ ಉದ್ದಗಲಕ್ಕೂ ಹರಡಿರುವ ಮರುಭೂಮಿಯಲ್ಲಿ ಈ ನೂತನ ನಿರ್ಮಾಣ ಚಟುವಟಿಕೆಗಳು ನಡೆಯುತ್ತಿವೆ. ಇವು ಚೀನಾದ ಪ್ರಮುಖ ಅಣ್ವಸ್ತ್ರ ಕ್ಷಿಪಣಿ ನೆಲೆಯ ಸುತ್ತಲೂ ವ್ಯಾಪಿಸಿದೆ. ಈ ಕಾಂಕ್ರೀಟ್ ನಿರ್ಮಿತ ಕ್ಷಿಪಣಿ ಉಡಾವಣಾ ಪ್ಲ್ಯಾಟ್‌ಫಾರಂಗಳನ್ನು ಮರುಭೂಮಿಯಾದ್ಯಂತ ನಿರ್ಮಿಸಲಾದ ರಸ್ತೆಗಳು ಸಂಪರ್ಕಿಸುತ್ತವೆ. ರಸ್ತೆಯಲ್ಲಿ ಸಂಚರಿಸುವ ಖಂಡಾತರ ಪ್ರಕ್ಷೇಪಕ ಕ್ಷಿಪಣಿ (ಐಸಿಬಿಎಂ) ಲಾಂಚರ್‌ಗಳಿಗೆ ಮಾತ್ರವಲ್ಲದೆ ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆಗಳಿಗಾಗಿಯೂ ಇವುಗಳನ್ನು ನಿರ್ಮಿಸಲಾಗುತ್ತಿದೆ.

ಹ್ಯಾಮಿ ಕ್ಷಿಪಣಿ ಉಡಾವಣಾ ತಾಣಗಳ ಸಮೀಪದಲ್ಲೇ ಯೋಧರಿಗೆ ವಸತಿಗೃಹಗಳು, ಘನ ಮಿಲಿಟರಿ ವಾಹನಗಳ ಡಿಪೋ, ಭೂಗತ ಶಸ್ತ್ರಾಸ್ತ್ರ ಸಂಗ್ರಹಾಗಾರ, ರೈಲ್ವೆ ಮಾರ್ಗಗಳು ಹಾಗೂ ರನ್‌ವೇಗಳನ್ನು ಕೂಡಾ ನಿರ್ಮಿಸಲಾಗಿರುವುದನ್ನು ಉಪಗ್ರಹ ಚಿತ್ರಗಳು ತೋರಿಸಿವೆ ಎಂದು ರಾಯ್ಟರ್ಸ್ ವರದಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries