HEALTH TIPS

ಕದನ ವಿರಾಮ ವಿಸ್ತರಣೆ : ಅಂತಿಮ ನಿರ್ಧಾರ ಮುಂದೂಡಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಶ್ವೇತಭವನದ ಪರಿಸ್ಥಿತಿ ಅವಲೋಕನ ಕೊಠಡಿಯಲ್ಲಿ ಶುಕ್ರವಾರ ಎರಡು ತಾಸುಗಳ ಕಾಲ ಸಭೆ ನಡೆಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆ ಕದನವಿರಾಮ ವಿಸ್ತರಿಸುವ ಕುರಿತ ತನ್ನ ಅಂತಿಮ ನಿರ್ಧಾರವನ್ನು ಮುಂದೂಡಿದ್ದಾರೆ. ಈ ಮಧ್ಯೆ ಕದನವಿರಾಮ ವಿಸ್ತರಣೆಗೆ ಸಂಬಂಧಿಸಿ ಅಮೆರಿಕ ಮುಂದಿಟ್ಟಿರುವ ಶರತ್ತುಗಳನ್ನು ಇರಾನ್ ತಿರಸ್ಕರಿಸಿದೆ.

ಅಮೆರಿಕದ ಮೇಲೆ ತನಗಿರುವ ಅಪನಂಬಿಕೆಯನ್ನು ಉಲ್ಲೇಖಿಸಿರುವ ಇರಾನ್, ಬಾಯಿ ಮಾತಿನ ಉಪಚಾರದ ಬದಲು ಭರವಸೆಗಳನು ಕಾರ್ಯಗತಗೊಳಿಸುವಂತೆ ಟ್ರಂಪ್ ಆಡಳಿತವನ್ನು ಆಗ್ರಹಿಸಿದೆ.

ಶ್ವೇತಭವನದಲ್ಲಿ ತಜ್ಞರೊಂದಿಗೆ ಸಮಾಲೋಚನೆಗೆ ಮುನ್ನ ಟ್ರಂಪ್ ಅವರು ಸಾಮಾಜಿಕ ಜಾಲತಾಣ ಟ್ರೂಥ್ ಸೋಶಿಯಲ್‌ನಲ್ಲಿ ಪ್ರಕಟಿಸಿದ ಪೋಸ್ಟ್ ಒಂದರಲ್ಲಿ ಇರಾನ್ ಜೊತೆಗಿನ ಸಂಭಾವ್ಯ ಕದನವಿರಾಮ ಕುರಿತಾಗಿ ತಾನು ಅಂತಿಮ ನಿರ್ಧಾರವನ್ನು ಕೈಗೊಳ್ಳುವುದಾಗಿ ಹೇಳಿದ್ದರು. ಆದರೆ ಇರಾನ್ ಜೊತೆಗಿನ ಕೆಲವು ಪ್ರಮುಖ ವಿವಾದಗಳು ಇತ್ಯರ್ಥವಾಗದೆ ಉಳಿದಿರುವ ಹಿನ್ನೆಲೆಯಲ್ಲಿ ಟ್ರಂಪ್ ಅವರು ಕದನವಿರಾಮ ವಿಸ್ತರಣೆಯ ನಿರ್ಧಾರವನ್ನು ಮುಂದೂಡಿದ್ದಾರೆ ಎನ್ನಲಾಗಿದೆ. ಇರಾನ್‌ನ ಆಸ್ತಿಗಳ ಮೇಲೆ ಹಾಕಲಾದ ಮುಟ್ಟುಗೋಲನ್ನು ಹಿಂತೆಗೆದುಕೊಳ್ಳುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಆದರೆ ಯಾವುದೇ ಒಪ್ಪಂದವು ಟ್ರಂಪ್ ವಿಧಿಸಿರುವ ಕೆಂಪುಗೆರೆ (ಪ್ರಮುಖ ಷ ರತ್ತುಗಳು)ಗಳಿಗೆ ಅನುಗುಣವಾಗಿರಬೇಕು ಎಂದು ಶ್ವೇತವವನದ ಮೂಲಗಳು ತಿಳಿಸಿವೆ.

'' ಪರಿಸ್ಥಿತಿ ಅವಲೋಕನ ಕೊಠಡಿಯಲ್ಲಿ ನಡೆದ ಎರಡು ತಾಸುಗಳ ಕಾಲ ಸಭೆ ಮುಕ್ತಾಯಗೊಂಡಿದೆ. ಅಧ್ಯಕ್ಷ ಟ್ರಂಪ್ ಅವರು ಅಮೆರಿಕಕ್ಕೆ ಒಳಿತಾಗುವಂತಹ ಒಪ್ಪಂದವನ್ನು ಮಾತ್ರವೇ ಏರ್ಪಡಿಸಿಕೊಳ್ಳುತ್ತಾರೆ. ಇರಾನ್ ಎಂದೂ ಅಣ್ವಸ್ತ್ರವನ್ನು ಹೊಂದಲು ಸಾಧ್ಯವಿಲ್ಲ '' ಎಂದು ಟ್ರಂಪ್ ಆಡಳಿತದ ಉನ್ನತ ಅಧಿಕಾರಿಯೊಬ್ಬರು ನ್ಯೂಯಾಕ್ ಟೈಮ್ಸ್ ಪತ್ರಿಕೆಗೆ ತಿಳಿಸಿದ್ದಾರೆ.

ಹಾರ್ಮುಝ್ ಜಲಸಂಧಿಯನ್ನು ತಕ್ಷಣವೇ ಹಡಗುಗಳ ಸಂಚಾರಕ್ಕೆ ತೆರೆದಿಡಬೇಕು ಮತ್ತು ಅಲ್ಲಿ ಯಾವುದೇ ಸುಂಕವನ್ನು ವಿಧಿಸುವಂತಿಲ್ಲ'' ಟ್ರಂಪ್ ಅವರು ಇದಕ್ಕೂ ಮುನ್ನ ಟ್ರೂಥ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿದ್ದರು.

ಅಮೆರಿಕದ ಖಾತರಿಗಳನ್ನು ನಂಬಲ್ಲ: ಇರಾನ್

ಅಮೆರಿಕ ಜೊತೆ ಯಾವುದೇ ಒಪ್ಪಂದವನ್ನು ಏರ್ಪಡಿಸುವ ಬಗ್ಗೆ ಇರಾನ್ ಸಂಸತ್‌ನ ಸ್ಪೀಕರ್ ಘಾಲಿಬಾಫ್ ಸಂದೇಹವನ್ನು ವ್ಯಕ್ತಪಡಿಸಿದ್ದಾರೆ. ನಾವು ಅಮೆರಿಕ ನೀಡುವ ಖಾತರಿಗಳಿಗಳನ್ನು ಅಥವಾ ಮಾತುಗಳನ್ನು ನಂಬುವುದಿಲ್ಲ. ಕೇವಲ ಮಾತುಗಳನ್ನು ಕೃತಿಗಿಳಿಸುವುದೇ ಒಪ್ಪಂದದ ಮಾನದಂಡವಾಗಿರಬೇಕು. ಇರಾನ್ ಇಸ್ಲಾಮಿಕ್ ಗಣರಾಜ್ಯವು ತನ್ನ ಹಕ್ಕುಗಳನ್ನು ಕ್ಷಿಪಣಿಗಳ ಮೂಲಕ ಸಾಧಿಸಿದೆಯೇ ಮಾತುಕತೆಗಳ ಮೂಲಕ ಅಲ್ಲವೆಂದು ಅವರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries