ಬೀಜಿಂಗ್: ಬಾಹ್ಯಾಕಾಶದಲ್ಲಿ ಏಳು ತಿಂಗಳು ಕಳೆದು, ಗಗನಯಾನಿಗಳ ಮತ್ತೊಂದು ತಂಡಕ್ಕೆ ಕಾರ್ಯಭಾರ ಹಸ್ತಾಂತರಿಸಿರುವ ಚೀನಾದ ಮೂವರು ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಶುಕ್ರವಾರ ಹಿಂದಿರುಗಿದರು.
ಗಗನಯಾನಿಗಳಾದ ಝಾಂಗ್ ಲು, ವು ಫಿ ಹಾಗೂ ಝಾಂಗ್ ಹಾಂಗ್‌ಝಾಂಗ್ ಅವರನ್ನು ಹೊತ್ತ ಗಗನನೌಕೆ 'ಶೆಂಝೌ-21', ಚೀನಾದ ಮಂಗೋಲಿಯಾ ಪ್ರದೇಶದಲ್ಲಿನ ನಿಗದಿತ ಸ್ಥಳದಲ್ಲಿ ಸುರಕ್ಷಿತವಾಗಿ ಇಳಿಯಿತು.
ಚೀನಾ, 2030ರ ವೇಳೆಗೆ ತನ್ನ ಗಗನಯಾನಿಗಳನ್ನು ಚಂದ್ರನ ಅಂಗಳದಲ್ಲಿ ಇಳಿಸಲು ಸಿದ್ಧತೆ ನಡೆಸಿದೆ.
ಗಗನಯಾನಿಗಳಾದ ಝು ಯಾಂಗ್‌ಝು, ಝಾಂಗ್ ಜಿಯುಯಾನ್ ಹಾಗೂ ಲೈ ಕಯಿಂಗ್ ಅವರು 'ಶೆಂಝೌ-23' ಗಗನನೌಕೆ ಮೂಲಕ ಚೀನಾದ 'ತಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣ'ಕ್ಕೆ ತೆರಳಿದ್ದಾರೆ. ಇವರು ಮುಂದಿನ ಒಂದು ವರ್ಷ ಸಂಶೋಧನೆ, ಪ್ರಯೋಗಗಳನ್ನು ನಡೆಸಲಿದ್ದಾರೆ ಎಂದು ಷಿನ್‌ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.
ಚೀನಿ ಭಾಷೆಯಲ್ಲಿ ತಿಯಾಂಗಾಂಗ್ ಎಂದರೆ 'ಸ್ವರ್ಗದ ಅರಮನೆ' ಎಂದರ್ಥ.

