ಮುಳ್ಳೇರಿಯ: ಕಾರಡ್ಕ ಬಳಿಯ ಕೊಟ್ಟುಂಗುಳಿ ನಿವಾಸಿ, ಕೃಷಿಕ ಕುಞಂಬು ನಾಯರ್ ಅವರ ಪುತ್ರ ಅಜಿತ್ ಕುಮಾರ್ (43)ಅವರ ಮೃತದೇಹ ಮನೆ ಸಮೀಪದ ಅಡಿಕೆ ತೋಟದ ಕೆರೆಯಲ್ಲಿ ಪತ್ತೆಯಾಗಿದೆ. ನೀರಲ್ಲಿ ಮುಳುಗೇಳುತ್ತಿದ್ದ ಇವರನ್ನು ತಕ್ಷಣ ನೀರಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಇವರ ಕೈನರ ಕತ್ತರಿಸಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ನೀರಿಗೆ ಧುಮುಕುವ ಮೊದಲು ಕೈನರ ಕತ್ತರಿಸಿಕೊಂಡಿರಬೇಕೆಂದು ಸಂಶಯಿಸಲಾಗಿದೆ.
ಈ ಹಿಂದೆ ಮಡಿಕೇರಿಯಲ್ಲಿ ಹೋಟೆಲ್ ನಡೆಸುತ್ತಿದ್ದ ಅಜಿತ್ ವ್ಯಾಪಾರದಲ್ಲಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಆರ್ಥಿಕ ಸಮಸ್ಯೆಗೆ ಸಿಲುಕಿದ್ದರೆನ್ನಲಾಗಿದೆ. ಅನಂತರ ಊರಿಗೆ ವಾಪಸಾಗಿ ಕೃಷಿಯಲ್ಲಿ ಸಕ್ರಿಯರಾಗಿದ್ದರು. ಘಟನೆಗೆ ಸಂಬಂಧಿಸಿ ಆದೂರು ಪೋಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

