ಪೆರ್ಲ: ತೀವ್ರ ಜ್ವರ ಬಾಧಿಸಿ ಪುತ್ತೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಯಲ್ಲಿದ್ದ ಎಣ್ಮಕಜೆ ಪಂಚಾಯಿತಿ ಪೆರ್ಲ ಸನಿಹದ ಖಂಡಿಗೆ ಅಬ್ಬಿಕಟ್ಟೆ ನಿವಾಸಿ, ರಬ್ಬರ್ ಟ್ಯಾಪಿಂಗ್ ಕಾರ್ಮಿಕ ದಾಮೋದರ ನಾಯ್ಕ್ (42)ಸಾವಿಗೀಡಾಗಿದ್ದಾರೆ.
ರಬ್ಬರ್ ಟ್ಯಾಪಿಂಗ್ ಕೆಲಸ ನಿರ್ವಹಿಸುತ್ತಿದ್ದ ದಾಮೋದರ ಅವರಿಗೆ ಪದೇ ಪದೇ ಜ್ವರ ಬರುತ್ತಿದ್ದು ಉಕ್ಕಿನಡ್ಕದ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತೆರಳಿದಾಗ ಜ್ವರ ಉಲ್ಬಣಗೊಂಡಿತ್ತು. ಇಲಿ ಜ್ವರ ಬಾಧಿಸಿರಬೇಕೆಂದು ಸಂಶಯ ವ್ಯಕ್ತಪಡಿಸಲಾಗಿದ್ದು, ನಂತರ ಇವರನ್ನು ಉನ್ನತ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ದಾಮೋದರ ಅವರು ಸಿಪಿಐಎಂ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು, ಪಕ್ಷದ ಖಂಡಿಗೆ ಬ್ರಾಂಚ್ ಸಮಿತಿ ಸದಸ್ಯರಾಗಿದ್ದರು.


