HEALTH TIPS

ಲೆಬನಾನ್| ಇಸ್ರೇಲ್ ದಾಳಿಯಲ್ಲಿ ಇಬ್ಬರು ವೈದ್ಯಕೀಯ ಸಿಬ್ಬಂದಿ ಮೃತ್ಯು

ಬೈರೂತ್: ಕದನ ವಿರಾಮದ ನಡುವೆಯೇ ದಕ್ಷಿಣ ಲೆಬನಾನ್‍ನ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದೊಂದಿಗೆ ಸಂಯೋಜಿತವಾಗಿರುವ ಇಬ್ಬರು ವೈದ್ಯಕೀಯ ಸಿಬ್ಬಂದಿ ಮೃತಪಟ್ಟಿದ್ದು, ಇತರ ಐವರು ಗಾಯಗೊಂಡಿರುವುದಾಗಿ ಲೆಬನಾನ್‍ನ ಆರೋಗ್ಯ ಇಲಾಖೆ ರವಿವಾರ ಹೇಳಿದೆ.

ಈ ಮಧ್ಯೆ, ಶನಿವಾರ ತಡರಾತ್ರಿಯಿಂದ ಲೆಬನಾನ್‍ನಾದ್ಯಂತ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 7 ಮಂದಿ ಮೃತಪಟ್ಟಿದ್ದು, ಮೂವರು ಮಕ್ಕಳ ಸಹಿತ 13 ಮಂದಿ ಗಾಯಗೊಂಡಿದ್ದಾರೆ. ಬೈರೂತ್ ಬಳಿಯ ಸಾದಿಯಾತ್ ಹೆದ್ದಾರಿ ಪ್ರದೇಶದ ಮೇಲೆಯೂ ಇಸ್ರೇಲ್ ಸೇನೆ ಎರಡು ದಾಳಿ ನಡೆಸಿದೆ ಎಂದು ವರದಿಯಾಗಿದೆ.

ಇದಕ್ಕೆ ಪ್ರತಿಯಾಗಿ ಉತ್ತರ ಇಸ್ರೇಲ್‍ನ ಮೇಲೆ ಎರಡು ಬಾರಿ ಡ್ರೋನ್ ದಾಳಿ ನಡೆಸಿರುವುದಾಗಿ ಹಿಜ್ಬುಲ್ಲಾ ಹೇಳಿದೆ. ಇಸ್ರೇಲ್ ಪ್ರದೇಶದ ಮೇಲೆ ಹಲವು ಡ್ರೋನ್‍ಗಳನ್ನು ಪ್ರಯೋಗಿಸಲಾಗಿದ್ದು ಸೇನೆಯ ಮೀಸಲು ಯೋಧ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಶನಿವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆಗಳ ಅವಧಿಯಲ್ಲಿ ಹಿಜ್ಬುಲ್ಲಾದ 85 ಮೂಲಸೌಕರ್ಯಗಳನ್ನು ಗುರಿಯಾಗಿಸಿ ಪ್ರತಿದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries