HEALTH TIPS

ದೇಶದ ಯುವಜನರ ಉದ್ಯೋಗ, ಮಾನ್ಯತೆಗೆ ಅಂತರರಾಷ್ಟ್ರೀಯ ಒಪ್ಪಂದ: ಪ್ರಧಾನಿ ಮೋದಿ

 ನವದೆಹಲಿ: ಭಾರತದ ಅಂತರರಾಷ್ಟ್ರೀಯ ಒಪ್ಪಂದಗಳನ್ನು ದೇಶದ ಯುವಜನರಿಗಾಗಿ ರೂಪಿಸಲಾಗಿದೆ. ದೇಶದ ಯುವಜನರಿಗೆ ಉದ್ಯೋಗ ಮತ್ತು ಜಾಗತಿಕ ಮಾನ್ಯತೆ ಸಿಗುವಂತೆ ಮಾಡುವುದೇ ಇದರ ಉದ್ದೇಶ ಎಂದು ಪ್ರಧಾನಿ ಮೋದಿ ಶನಿವಾರ ಹೇಳಿದ್ದಾರೆ. 


ದೇಶದ 47 ಸ್ಥಳಗಳಲ್ಲಿ ನಡೆದ 19ನೇ 'ರೋಜ್‌ಗಾರ್ ಮೇಳ'ದಲ್ಲಿ 51,000 ಯುವಜನರಿಗೆ ವರ್ಚುವಲ್ ಆಗಿ ಕೇಂದ್ರ ಸರ್ಕಾರಿ ಉದ್ಯೋಗಗಳ ನೇಮಕಾತಿ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

'ರೋಜ್‌ಗಾರ್ ಮೇಳ' ಆರಂಭವಾದಾಗಿನಿಂದ ದೇಶದಾದ್ಯಂತ ನಡೆದ ಇಂತಹ 18 ಕಾರ್ಯಕ್ರಮಗಳ ಮೂಲಕ ಸುಮಾರು 12 ಲಕ್ಷ ನೇಮಕಾತಿ ಪತ್ರಗಳನ್ನು ನೀಡಲಾಗಿದೆ.

ತಾವು ಇತ್ತೀಚೆಗೆ ಕೈಗೊಂಡ ಐದು ದೇಶಗಳ ಪ್ರವಾಸದ ಒಳನೋಟಗಳನ್ನು ಹಂಚಿಕೊಂಡ ಪ್ರಧಾನಿ, ಡಜನ್‌ಗಟ್ಟಲೆ ರಾಷ್ಟ್ರಗಳನ್ನು ಪ್ರತಿನಿಧಿಸುವ ಜಾಗತಿಕ ಕಾರ್ಪೊರೇಟ್ ನಾಯಕರು ಭಾರತದ ಯುವಜನತೆ ಮತ್ತು ಅದರ ತಾಂತ್ರಿಕ ಪ್ರಗತಿಯ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ನೆದರ್ಲೆಂಡ್ಸ್‌ ಜೊತೆ ಅರೆವಾಹಕಗಳು, ನೀರು, ಕೃಷಿ ಮತ್ತು ಸುಧಾರಿತ ಉತ್ಪಾದನೆ; ಸ್ವೀಡನ್ ಜೊತೆ ಕೃತಕ ಬುದ್ಧಿಮತ್ತೆ (ಎಐ) ಮತ್ತು ಡಿಜಿಟಲ್ ನಾವೀನ್ಯ ಕ್ಷೇತ್ರಗಳಲ್ಲಿ ಸಹಕಾರ; ನಾರ್ವೆ ಜೊತೆ ಹಸಿರು ತಂತ್ರಜ್ಞಾನ ಮತ್ತು ಕಡಲ ಸಹಕಾರ; ಯುಎಇ ಜೊತೆ ಇಂಧನ ಮತ್ತು ತಂತ್ರಜ್ಞಾನ ಕಾರ್ಯತಂತ್ರದ ಪಾಲುದಾರಿಕೆ; ಇಟಲಿಯೊಂದಿಗೆ ರಕ್ಷಣೆ, ನಿರ್ಣಾಯಕ ಖನಿಜಗಳು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಅವರು ವಿವರಿಸಿದರು.

ಇಂದು ನೇಮಕಗೊಂಡ ಯುವಜನರು ದೇಶದ ಅಭಿವೃದ್ಧಿಯ ಪ್ರಯಾಣದಲ್ಲಿ ಪ್ರಮುಖ ಪಾಲುದಾರರಾಗಲಿದ್ದಾರೆ ಎಂದು ಪ್ರಧಾನಿ ಮೋದಿ ತಿಳಿಸಿದರು. 'ಈ ಎಲ್ಲರೂ ರೈಲ್ವೆ ಬ್ಯಾಂಕಿಂಗ್ ರಕ್ಷಣೆ ಆರೋಗ್ಯ ಶಿಕ್ಷಣ ಮತ್ತು ಇತರ ಹಲವು ವಲಯಗಳಲ್ಲಿ ತಮ್ಮ ಹೊಸ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ' ಎಂದರು. 'ಮುಂಬರುವ ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಸಂಕಲ್ಪವನ್ನು ಈಡೇರಿಸುವಲ್ಲಿ ನೀವೆಲ್ಲರೂ ಪ್ರಮುಖ ಪಾತ್ರ ವಹಿಸಲಿದ್ದೀರಿ. ಈ ಸಾಧನೆಗಳಾಗಿ ನಿಮ್ಮನ್ನು ಮತ್ತು ನಿಮ್ಮ ಕುಟುಂಬ ಸದಸ್ಯರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ' ಎಂದು ಅವರು ಹೇಳಿದರು. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries