ನವದೆಹಲಿ: 'ನೀಟ್-ಯುಜಿ' ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಆರೋಪಿ ಶುಭಂ ಖೈರ್‌ನಾರ್‌ನನ್ನು ದೆಹಲಿ ನ್ಯಾಯಾಲಯ ಭಾನುವಾರ ಜೂನ್ 6ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.
ಸಂಘಟಿತ ತಂಡವೊಂದು ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿದ್ದು, ಅದರಲ್ಲಿ ಆರೋಪಿ ಶುಭಂ ಕೈವಾಡವೂ ಇದೆ ಎನ್ನುವ ಆರೋಪಕ್ಕಾಗಿ ಬಂಧಿಸಲಾಗಿತ್ತು.
ಸಿಬಿಐ ವಶದಲ್ಲಿರುವ ಅವಧಿ ಪೂರ್ಣಗೊಂಡಿರುವ ಕಾರಣ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ನೀಡಬೇಕೆಂದು ಕೋರಿ ಸಿಬಿಐ ಮನವಿ ಮಾಡಿತ್ತು.
ವಿಶೇಷ ನ್ಯಾಯಾಧೀಶರಾದ ರುಚಿ ಅಗರ್ವಾಲ್ ಅವರು ಸಿಬಿಐ ಮನವಿ ಪುರಸ್ಕರಿಸಿ, ಆರೋಪಿಯನ್ನು ಜೂನ್6ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಇತರೆ ಐವರು ಆರೋಪಿಗಳ ಸಿಬಿಐ ವಶದ ಅವಧಿಯೂ ಸೋಮವಾರ ಮುಕ್ತಾಯಗೊಳ್ಳಲಿದ್ದು, ಅವರನ್ನೂ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ನಿರೀಕ್ಷೆ ಇದೆ.

