ಮಂಜೇಶ್ವರ: ಪಘಾತಕ್ಕೀಡಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವಾಗಿರುವ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕರ್ನಾಟಕದ ಗದಗ ಲಕ್ಷ್ಮೇಶ್ವರ ತಾಲೂಕಿನ ಬಳಿಹೊಸು ನಿವಾಸಿ ಎಂ.ಎಲ್. ಸಂತೋಷ್ ಅವರ ಬೈಕ್ ಕಳವಾಗಿದ್ದು, ಇವರು ನೀಡಿದ ದೂರಿನನ್ವಯ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಸಂತೋಷ್ ಕಾಸರಗೋಡು ನುಳ್ಳಿಪ್ಪಾಡಿಯ ಕ್ವಾರ್ಟರ್ಸ್‍ವೊಂದರಲ್ಲಿ ವಾಸಿಸುತ್ತಿದ್ದು, ಇವರು ಚಲಾಯಿಸುತ್ತಿದ್ದ ಬೈಕ್ ಮೇ 1ರಂದು ರಾತ್ರಿ 9.30ಕ್ಕೆ ಉಪ್ಪಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿತ್ತು. ಇದರಿಂದ ಬೈಕ್‍ನನ್ನು ರಸ್ತೆ ಅಂಚಿಗೆ ನಿಲ್ಲಿಸಿ ಸಂತೋಷ್ ಮರಳಿದ್ದರು. ಅನಂತರ ಬೈಕ್ ತರಲೆಂದು ಸ್ಥಳಕ್ಕೆ ತೆರಳಿದಾಗ ಬೈಕ್ ನಾಪತ್ತೆಯಾಗಿರುವುದಾಘಿ ದೂರಿನಲ್ಲಿ ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಸಿಸಿಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲಿಸಿ ಕಳ್ಳರನ್ನು ಪತ್ತೆಹಚ್ಚಲು ಪೆÇಲೀಸರು ಕ್ರಮ ಆರಂಭಿಸಿದ್ದಾರೆ.

