ಕಾಸರಗೋಡು: ಬೈಕ್ ಹೊಂಡಕ್ಕೆ ಬಿದ್ದು ಸವಾರ ನೀಲೇಶ್ವರ ಚಾತಮತ್ತ್ ಚುಳ್ಳಿಕ್ಕಾಡ್ ನಿವಾಸಿ ರಾಘವನ್ ಕೆ.ವಿ-ವಸುಮತಿ ದಂಪತಿ ಪುತ್ರ ಕೆ.ವಿ. ಶಿನೋಯ್ (41)ಸವಿಗೀಡಾಗಿದ್ದಾರೆ. ಈ ಹಿಂದೆ ಗಲ್ಫ್‍ನಲ್ಲಿ ದುಡಿಯುತ್ತಿದ್ದ ಇವರು ಇತ್ತೀಚೆಗಷ್ಟೇ ಊರಿಗೆ ವಾಪಸಗಿ ಇಲ್ಲೇ ದುಡಿಯುತ್ತಿದ್ದರು.
ಶಿನೋಯ್ ಮಂಗಳವಾರ ಬೈಕ್‍ನಲ್ಲಿ ಸಂಚರಿಸುತ್ತಿರುವ ಮಧ್ಯೆ ನೀಲೇಶ್ವರ ಕರುವಂಜಲ ರಸ್ತೆಯ ಚಾತಮತ್ತ್‍ನಲ್ಲಿ ಬೈಕ್ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದಿದೆ. ಶಿನೋಯ್ ಮೊದಲು ಕಂದಕಕ್ಕೆ ಬಿದ್ದಿದ್ದು, ನಂತರ ಬೈಕ್ ಅವರ ದೇಹದ ಮೇಲೆ ಬಿದ್ದಿರುವುದರಿಂದ ಹೆಚ್ಚಿನ ಗಾಯಗಳುಂಟಾಘಿತ್ತು. ತಕ್ಷಣ ಸ್ಥಳೀಯರು ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.

