HEALTH TIPS

ಸಮಾಜಕ್ಕೆ ಸಂಸ್ಕಾರವನ್ನು ಬೋಧಿಸುವ ಕಲೆ ಯಕ್ಷಗಾನ- ಸಿರಿಬಾಗಿಲು ಪ್ರತಿಚ್ಠಾನದಲ್ಲಿ ಶೃಂಗೇರಿ ಜಗದ್ಗುರುಗಳು

ಕಾಸರಗೋಡು: "ಭಾರತೀಯ ಪರಂಪರೆಯಲ್ಲಿ ಕಲೆಗಳು ಕೇವಲ ಮನೋರಂಜನೆಯ ಪ್ರತೀಕವಾಗಿರದೆ,  ಸಮಾಜಕ್ಕೆ ಸಂಸ್ಕಾರ ಬೋಧಿಸುವ ಮಾಧ್ಯಮವಾಗಿ ಬೆಳೆದುಬಂದಿರುವುದಾಗಿ ಶೃಂಗೇರಿ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಜಗದ್ಗುರು  ಶ್ರೀ ಭಾರತೀ ತೀರ್ಥ ಪಾದಂಗಳವರ ತತ್ಕರಕಮಲ ಸಂಜಾತ  ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ತಿಳಿಸಿದ್ದಾರೆ. 


ಅವರು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಎನ್. ಎಂ.ಪಿ.ಎ. ಮಂಗಳೂರು(ಫೆÇೀರ್ಟ್ ಅಥಾರಿಟಿ ಸಂಸ್ಥೆಯು) ನೀಡಿದ 15 ಲಕ್ಷ ರೂಪಾಯಿಗಳ ಸಿ .ಎಸ್.ಆರ್.ಫಂಡ್ ಮೂಲಕ  ನಿರ್ಮಿಸಲಾದ ಬ್ರಹ್ಮೈಕ್ಯ  ಶ್ರೀ ಕೇಶವಾನಂದ ಭಾರತೀ ಯಕ್ಷಗಾನ ಪರ್ಫಾರ್ಮೆನ್ಸ್ ಹಾಲ್ ಲೋಕಾರ್ಪಣೆಗೈದು ಆಶೀರ್ವಚನ ನಿಡಿದರು.  

ಯಕ್ಷಗಾನಕ್ಕೆ ಪಾರಂಪರಿಕ ಹಿನ್ನೆಲೆ ಇದೆ. ಯಕ್ಷಗಾನ ಕಲೆ ವೇದ-ಪುರಾಣ ಕಥೆಗಳನ್ನು ಆಧರಿಸಿ ಅದರ ಪ್ರಧಾನ ಸಂದೇಶವನ್ನು ಸಮಾಜಕ್ಕೆ ಸಾರುವ ಜತೆಗೆ ಜನರಲ್ಲಿ ಸಂಸ್ಕಾರ ಬೋಧಿಸುವ ಕಲೆಯಾಗಿ ನೆಲೆ ನಿಂತಿದೆ.ಈ ನಿಟ್ಟಿನಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಭಾಗವತ ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅವರ ನೇತೃತ್ವದಲ್ಲಿ ನಡೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.

ಬ್ರಹ್ಮಶ್ರೀ ಇರುವೈಲು ಕೃಷ್ಣ ದಾಸ ತಂತ್ರಿ, ಯೋಗೀಶ ಅಡಿಗ ಮತ್ತು ಬಳಗದವರು ಕುಂಬಳೆ ವಿನಯರಾಜ ಶೆಟ್ಟಿ ಉದ್ಯೋಗಿಗಳು ಎನ್ ಎಂ ಪಿ ಏ ಮಂಗಳೂರು, ಮಧೂರು ಗ್ರಾಪಂ ಅಧ್ಯಕ್ಷೆ ಸುಜ್ಞಾನಿ ಶಾನುಭಾಗ್, ಪೆÇ್ರಫೆಸರ್ ಎ.ಶ್ರೀನಾಥ ಕಾಸರಗೋಡು,  ಶೀನ ಶೆಟ್ಟಿ ಕಜೆ,  ಜಯಾನಂದ ಕುಮಾರ್ ಹೊಸದುರ್ಗ,   ರವೀಂದ್ರರೈ ಸಿರಿಬಾಗಿಲು,  ಶ್ಯಾಮ್ ಕುಂಚಿನಡ್ಕ,  ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕರ್ತರು, ವಿವಿಧ ಭಜನಾ ಸಂಘಗಳ ಪದಾಧಿಕಾರಿಗಳು, ದಿ. ಸಿರಿಬಾಗಿಲು ವೆಂಕಪ್ಪಯ್ಯನವರ ಮನೆಯ ಸದಸ್ಯರು ಊರ ಪರವೂರು ಹಲವಾರು ಗಣ್ಯರು ಭಾಗವಹಿಸಿ ಮಂತ್ರಾಕ್ಷತೆ ಸ್ವೀಕರಿಸಿದರು. 

ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು ಸ್ವಾಗತಿಸಿದರು. ದಾಮೋದರ್ ಶರ್ಮ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು.  ರಾಜ ರಾಮರಾವ್ ಮೀಯಪದವು ವಂದಿಸಿದರು.   


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries