ಮಂಜೇಶ್ವರ: ಹೊಳೆಯಿಂದ ಅನಧಿಕೃತವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಮಂಜೇಶ್ವರ ಠಾಣೆ ಪೆÇಲೀಸರು ವಶಪಡಿಸಿ, ಚಾಲಕನನ್ನು ಬಂಧಿಸಿದ್ದಾರೆ. ಮಂಗಳೂರು ಪನೇಲ್ ಪಜೀರ್ ವಂಟೆ ಮಜಲ್ ನಿವಾಸಿ ರಸಾದ್ (18) ಬಂಧಿತ. ವರ್ಕಾಡಿ ಗ್ರಾಮದ ಕೋಣಂಬಯಲು ಎಂಬಲ್ಲಿ ಮಂಜೇಶ್ವರ ಠಾಣೆಯ ಎಸ್.ಐ ರತೀಶ್ ಹಾಗೂ ಉಪ್ಪಳ ಕಂಟ್ರೋಲ್ ರೂಮ್ ನ ಪೆÇಲೀಸರು ವಾಹನ ತಪಾಸಣೆ ನಡೆಸುವ ಮಧ್ಯೆ ಆಗಮಿಸಿದ ಮರಳು ಹೇರಿದ ಲಾರಿಯನ್ನು ತಪಾಸಣೆ ನಡೆಸಿದಾಗ ಅದು ಕಳಾಯಿ ಹೊಳೆಯಿಂದ ಅನಧಿಕೃತವಾಗಿ ಸಂಗ್ರಹಿಸಿದ ಮರಳು ಎಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಮರಳು ಸಹಿತ ಲಾರಿಯನ್ನು ವಶಕ್ಕೆ ತೆಗೆದು ಚಾಲಕನನ್ನು ಬಂಧಿಸಿ ಮರಳು ಕಳವು ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ರಿಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

