ಕಾಸರಗೋಡು: ನೀಲೇಶ್ವರದಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯ ಸನ್‍ಶೇಡ್ ಕುಸಿದು ಬಿದ್ದು ಬಾಲಕ ಮೃತಪಟ್ಟಿದ್ದಾನೆ. ನೀಲೇಶ್ವರ ಪಾರಪ್ಪಳ್ಳಿ ಮೂರನೇ ಮೈಲಿನ ನೂರುಲ್ ಹುದಾ ಮದ್ರಸಾ ಅಧ್ಯಾಪಕ ಹಾಗೂ ಮಸೀದಿಯ ಇಮಾಂ ಆಗಿರುವ ಮೂಲತಃ ಪಾಲಾ ನಿವಾಸಿ ಉಸ್ತಾದ್ ಅಬ್ದುಲ್ ಗಫೂರ್-ರೈನಾಬಿ ದಂಪತಿ ಪುತ್ರ ಮೊಹಮ್ಮದ್ ರಾಬಿನ್ (12) ಸಾವನ್ನಪ್ಪಿದ ಬಾಲಕ. ಈತ ಚಾಯೋತ್ ಶಾಲೆಯ ಆರನೇ ತರಗತಿ ವಿದ್ಯಾರ್ಥಿಯಾಗಿದ್ದನು.
ರಾಬಿನ್ ತನ್ನ ಮನೆ ಸನಿಹದಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಗೆ ರಾಬಿನ್ ಭಾನುವಾರ ಸಂಜೆ ತೆರಳಿದ್ದು, ಈ ವೇಳೆ ಮನೆಯ ಸನ್‍ಶೇಡ್ ಕುಸಿದು ಬಿದ್ದಿದೆ. ಗಂಭೀರ ಗಾಯಗೊಂಡ ಮಹಮ್ಮದ್‍ರಾಬಿನ್‍ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.

