HEALTH TIPS

ನಿವೃತ್ತರಾದ ಕಾಸರಗೋಡು ಜಿಲ್ಲಾ ಸಹಕಾರಿ ಸಂಘದ ಜಂಟಿ ನಿಬಂಧಕರಿಗೆ ಬೀಳ್ಕೊಡುಗೆ.

ಕುಂಬಳೆ : ಸೇವೆಯಿಂದ ನಿವೃತ್ತರಾದ ಕಾಸರಗೋಡು ಜಿಲ್ಲಾ ಸಹಕಾರಿ ಸಂಘದ ಜಂಟಿ ನಿಬಂಧಕ ವಿ. ಚಂದ್ರನ್ ಅವರನ್ನು ಮಂಜೇಶ್ವರ ತಾಲೂಕು ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ವೇದಿಕೆಯ ಆಶ್ರಯದಲ್ಲಿ ಕುಂಬಳೆ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಶಾಲು ಹೊದಿಸಿ, ಫಲ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಬೀಳ್ಕೊಡುಗೆ ಸಮಾರಂಭವನ್ನು ಸಹಕಾರಿ ಸಂಘದ ಸಹಾಯಕ ನಿಬಂಧಕ ರವೀಂದ್ರ ಉದ್ಘಾಟಿಸಿದರು. ಕುಂಬಳೆ ಕೃಷಿ ಸುಧಾರಣಾ ಸಹಕಾರಿ ಸಂಘದ ಕಾರ್ಯದರ್ಶಿ ಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು, ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕಿನ ಕಾರ್ಯದರ್ಶಿ ರಾಜನ್ ನಾಯರ್ ಸ್ವಾಗತಿಸಿ, ಮಂಗಲ್ಪಾಡಿ ಸಹಕಾರಿ ಬ್ಯಾಂಕಿನ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ವಂದಿಸಿದರು. 


ಸಹಕಾರಿ ಸಂಘ ಜನರಲ್ ವಿಭಾಗದಿಂದ ಲೆಕ್ಕಪರಿಶೋಧನಾ ವಿಭಾಗಕ್ಕೆ ವರ್ಗಾವಣೆಯಾಗುತ್ತಿರುವ ಸಹಕಾರಿ ಸಂಘದ ವಿಶೇಷ ದರ್ಜೆಯ ನಿರೀಕ್ಷಕ ವಿ. ಸುನೀಲ್ ಕುಮಾರ್ ಮತ್ತು ಸಹಕಾರಿ ಸಂಘದ ಜೂನಿಯರ್ ನಿರೀಕ್ಷಕ ಜಯರಾಮ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸರ್ಕಲ್ ಸಹಕಾರಿ ಯೂನಿಯನ್ ಸದಸ್ಯ ಪ್ರದೀಪ್ ಕುಮಾರ್, ಮಂಜೇಶ್ವರ ಸಹಕಾರಿ ಸಂಘದ ಸಹಾಯಕ ನಿಬಂಧಕ ಕಛೇರಿ ಅಧೀಕ್ಷಕ ರಾಜೇಶ್, ಜೂನಿಯರ್ ಇನ್ಸ್ಪೆಕ್ಟರ್ ಗಳಾದ ಅರುಣ್ ಕುಮಾರ್, ಸುಮನ್, ಅಂಗಡಿಮೊಗರು ಸಹಕಾರಿ ಬ್ಯಾಂಕ್ ಕಾರ್ಯದರ್ಶಿ ವಿಠ್ಠಲ್ ರೈ, ಮಜಿಬೈಲು ಸಹಕಾರಿ ಬ್ಯಾಂಕ್ ಕಾರ್ಯದರ್ಶಿ ಉದಯ್ ಕುಮಾರ್ ಶೆಟ್ಟಿ, ಪೆರ್ಲ ಸಹಕಾರಿ ಬ್ಯಾಂಕ್ ಕಾರ್ಯದರ್ಶಿ ಪ್ರಭಾಕರ್, ರಾಮಕೃಷ್ಣ ರೈ, ಪೈವಳಿಕೆ ಸಹಕಾರಿ ಬ್ಯಾಂಕ್ ಕಾರ್ಯದರ್ಶಿ ಕೇಶವ ಬಾಯಿಕಟ್ಟೆ, ಜೀಜ, ಜಯರಾಮ ಕೊಡ್ಲಮೊಗರು ಮೊದಲಾದವರು ಈ ಸಂದರ್ಭದಲ್ಲಿ ಮಾತನಾಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries