ಕಾಸರಗೋಡು: ಮದುವೆ ಮುಹೂರ್ತಕ್ಕೆ ನಿಮಿಷಗಳು ಬಾಕಿ ಉಳಿದಿರುವಂತೆ ನಾಪತ್ತೆಯಾದ ವರನನ್ನು, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಳಾಲ್ ಸಮೀಪದ ನಿವಾಸಿ ವಿಷ್ಣುನಾರಾಯಣನ್ (24) ಬಂಧಿತ. ಆರೋಪಿಯನ್ನು ವೆಳ್ಳರಿಕುಂಡು ಠಾಣೆ ಪೆÇಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈತನಿಗೆ ನ್ಯಾಯಾಲಯ ಎರಡು ವಾರಗಳ ನ್ಯಾಯಾಂಗಬಂಧನ ವಿಧಿಸಿದೆ.
ಇಪ್ಪತ್ತೈದರ ಹರೆಯದ ಯುವತಿಯೊಂದಿಗೆ ಈ ಹಿಂದೆ ಪ್ರೇಮದಲ್ಲಿದ್ದ ನಾರಾಯಣನ್ ಈಕೆಯನ್ನು ವಿವಾಹವಾಗಲು ತೀರ್ಮಾನಿಸಿದ್ದರು. ನಂತರ ಎರಡೂ ಮನೆಯವರು ಮಾತುಕತೆ ನಡೆಸಿ, ಕೈಗೊಂಡ ನಿರ್ಧಾರದಂತೆ ಇವರ ಮದುವೆಯನ್ನು ಮೇ 10ರಂದು ಬಳಾಲ್ ಸಮೀಪದ ಕ್ಷೇತ್ರವೊಂದರಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಮದುವೆಗೆ ಸಿದ್ಧತೆಗಳೆಲ್ಲಾ ಪೂರ್ಣಗೊಂಡು ವಧು ಹಾಗೂ ಸಂಬಂಧಿಕರು ಕ್ಷೇತ್ರಕ್ಕೆ ತಲುಪಿದ್ದರು. ಆದರೆ ಮುಹೂರ್ತ ಸಮಯವಾದರೂ ವರ ಹಾಗೂ ಆತನ ಸಂಬಂಧಿಕರು ತಲುಪಿರಲಿಲ್ಲ. ಇದರಿಂದ ವಧು ಹಾಗೂ ಆಕೆಯ ಸಂಬಂಧಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ಈ ಮಧ್ಯೆ ವರನ ಸಹೋದರಿ ಹಾಗೂ ಸಂಬಂಧಿಕರು ಕ್ಷೇತ್ರಕ್ಕೆ ತಲುಪಿ ವರ ನಾಪತ್ತೆಯಾಗಿರುವುದಾಗಿ ವಧುವಿನ ಸಂಬಂಧಿಕರಲ್ಲಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮದುವೆ ಮೊಟಕುಗೊಂಡು ಸಭಾಂಗಣದಿಂದ ಹಿಂತೆರಳಿದ್ದರು. ಈ ಮಧ್ಯೆ ವಿಷ್ಣುನಾರಾಯಣನ್ ತನ್ನ ಮೇಲೆ ವಿವಾಹಪೂರ್ವ ಲೈಂಗಿಕ ಕಿರುಕುಳ ನೀಡಿರುವುದಾಗಿ ಪ್ರಸಕ್ತ ವಧುವಾಗಿರುವ ಯುವತಿ ವೆಳ್ಳರಿಕುಂಡ್ ಪೆÇಲೀಸರಿಗೆ ನೀಡಿದ ದೂರಿನನ್ವಯ ಕೇಸು ದಾಖಲಿಸಿಕೊಂಡ ಪೆÇಲೀಸರು ವಿಷ್ಣುನಾರಾಯಣನ್‍ನನ್ನು ಬಂಧಿಸಿದ್ದರು.

