ಕಾಸರಗೋಡು: ಲಾರಿ ಮತ್ತು ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ವಿದ್ಯಾರ್ಥಿ ದಾರುಣವಾಗಿ ಮೃತಪಟ್ಟಿದ್ದಾನೆ. ಉದುಮ ಕೋಟೆಕುನ್ನು ನಿವಾಸಿ ನಸೀರ್- ರಸೀನಾ ದಂಪತಿ ಪುತ್ರ ಲುಕ್ಮಾನ್ (22)ಮೃತ ವಿದ್ಯಾರ್ಥಿ. ಮಂಗಳೂರಿನ ಶ್ರೀದೇವಿ ಕಾಲೇಜಿನ ಪ್ರಥಮ ವರ್ಷ ಬಿಬಿಎ ವಿದ್ಯಾರ್ಥಿಯಾಗಿರುವ ಲುಕ್ಮಾನ್ ಜಿಮ್‍ಗೆ ತೆರಳಿ, ಬೈಕಲ್ಲಿ ಮನೆಗೆ ವಾಪಸಾಗುವ ದಾರಿ ಮಧ್ಯೆ ಪಾಲಕುನ್ನು ಪೇಟೆಗೆ ತಲುಪಿದಾಗ ಕಾಸರಗೋಡು ಭಾಗದಿಂದ ಸರಕು ಹೇರಿಕೊಂಡು ಬರುತ್ತಿದ್ದ ಲಾರಿ ಬೈಕ್‍ಗೆ ಢಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಗಂಭೀರ ಗಾಯಗೊಂಡ ಲುಕ್ಮಾನ್‍ನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ಬೇಕಲ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


