ಕಾಸರಗೋಡು: ಕಣ್ಣೂರಿನ ಮಿಲಿಟರಿ ಕ್ಯಾಂಟೀನ್‍ನಲ್ಲಿ ಉದ್ಯೋಗ ಭರವಸೆ ನೀಡಿ ಹತ್ತಕ್ಕಿಂತಲೂ ಹೆಚ್ಚು ಮಹಿಳೆಯರಿಂದ ತಲಾ 25 ಸಾವಿರ ರೂ.ನಂತೆ ಎಗರಿಸಿರುವ ಬಗ್ಗೆ ಚಂದೇರ ಠಾಣೆ ಪೊಲೀಸರುಕೇಸು ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಸಮಗ್ರ ತನಿಖೆಗಾಗಿ ಉನ್ನತ ಪೆÇಲೀಸ್ ಅಧಿಕಾರಿಯನ್ನೊಳಗೊಂಡ ತಮಡವನ್ನು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ನೇಮಕಗೊಳಿಸಿದ್ದಾರೆ. ಕಾಞಂಗಾಡ್‍ನ ಖಾಸಗಿ ಸಂಸ್ಥೆಯೊಂದರ ಮಹಿಳಾ ಸಿಬ್ಬಂದಿ, ಸಿನೋಜ್ ಎಂಬಾತನೊಂದಿಗೆ ಸೇರಿ ಇದೇ ಸಂಸ್ಥೆಯ 15ರಷ್ಟು ನೌಕರರನ್ನು ವಂಚಿಸಿರುವುದಾಗಿ ದೂರುದಾರರಾದ ತೃಕರಿಪುರ ಎಡಚ್ಛಾಕ್ಕೆ ಮಾಚಿಕ್ಕಾಡ್ ಪರಿಸರ ನಿವಾಸಿಗಳು ತಿಳಿಸಿದ್ದಾರೆ.
ನಡಕ್ಕಾವ್ ನಿವಾಸಿ ಶೈನಿ ಎಂಬ ಮಹಿಳೆ ಕೇಂದ್ರ ಸರಕಾರಿ ಸಂಸ್ಥೆಯಾದ ಕಣ್ಣೂರಿನ ಮಿಲಿಟರಿ ಕ್ಯಾಂಟೀನ್‍ನಲ್ಲಿ ಉದ್ಯೋಗ ಭರವಸೆ ನೀಡಿ, ಸಂಸ್ಥೆಯ ಮಹಿಳೆಯರನ್ನು ಸಮೀಪಿಸಿದ್ದು, ಜಿತೇಶ್ ಎಂಬಾತ ವಂಚನೆಯ ರೂವಾರಿಯಾಗಿದ್ದಾನೆ. ಗೂಗಲ್ ಪೇ ಮೂಲಕ ಹಣ ಸಂದಾಯ ಮಾಡಲಾಗಿದ್ದು, ಕೆಲಸಕ್ಕೆ ಸೇರ್ಪಡೆಗೊಳ್ಳಲು ಪತ್ರ ರವಾನಿಸಿರುವುದಾಗಿ ತಿಳಿಸಿದ್ದರು. ಆದರೆ ಕೆಲಸ ನೀಡದೆ, ಹಣವನ್ನೂ ವಾಪಾಸುಮಾಡದೆ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

.webp)
