HEALTH TIPS

ನೀಟ್ ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟಿನೆ, ಹಲವರ ವಿರುದ್ಧ ಕೇಸು

ಕಾಸರಗೋಡು: ನೀಟ್ ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಈ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಹಕ್ಕು ಆಯೋಗ ರದ್ದುಪಡಿಸಿರುವುದನ್ನು ಪ್ರತಿಭಟಿಸಿ ಎಸ್‍ಎಫ್‍ಐ, ಕೆಎಸ್‍ಯು ಮತ್ತು ಎಂಎಸ್‍ಎಫ್ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರು ಜಿಲ್ಲೆಯ ವಿವಿಧೆಡೆ  ಪ್ರತಿಭಟನೆ ನಡೆಸಿದರು. 


ಕೆಎಸ್‍ಯು ಮತ್ತು ಎಂಎಸ್‍ಎಫ್ ನೇತೃತ್ವದಲ್ಲಿ ಕಾರ್ಯಕರ್ತರು ಕಾಸರಗೋಡು ಪ್ರಧಾನ ಅಂಚೆ ಕಚೇರಿ ಎದುರು ಧರಣಿ ನಡೆಸಿದರು. ಅಂಚೆ ಕಚೇರಿ ಮುಂದೆ ಇರಿಸಲಾದ ಪೆÇಲೀಸ್ ಬಾರಿಕೇಡ್ ದಾಟಿ ಅಂಚೆ ಕಚೇರಿಯೊಳಗೆ ನುಗ್ಗಲೆತ್ನಿಸಿದಾಗ ಪೆÇಲೀಸರು ಕಾರ್ಯಕರ್ತರನ್ನು ತಡೆದರು. ಈ ವೇಳೆ ಪ್ರತಿಭಟನಾ ನಿರತರು ಮತ್ತು ಪೆÇಲೀಸರ ಮಧ್ಯೆ ವಾಗ್ವಾದ, ನೂಕುನುಗ್ಗಲು ನಡೆಯಿತು. 

ಪ್ರತಿಭಟನಾಕಾರರ ವಿರುದ್ಧ ಕೇಸು:

ಪ್ರತಿಭಟನಾಕಾರರು ರಸ್ತೆ ತಡೆಯೊಡ್ಡಿ ವಾಹನ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತಡೆಯೊಡ್ಡಿದ ಆರೋಪದಂತೆ ಕೆಎಸ್‍ಯು ಜಿಲ್ಲಾಧ್ಯಕ್ಷ ಜಾವೇದ್ ಪುತ್ತೂರು, ಕೆ.ಎ ಅನ್ವರ್‍ಸಾದತ್ ಸುಲೈಮಾನ್, ಅಜೀಜ್ ಜೋಷಿ, ಎಂ.ಎ. ವರ್ಷರಾಜ್, ಪಿ. ವಿಷ್ಣು ಸೇರಿದಂತೆ 21 ಮಂದಿ ವಿರುದ್ಧ ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ. ಇದರ ಹೊರತಾಗಿ ಎಂಎಸ್‍ಎಫ್ ಕಾರ್ಯಕರ್ತರಾದ ಸಫ್ವಾನ್ ಎಡತ್ತೋಡು, ಕೆ.ಎ. ಯೂಸುಫ್, ಎ. ಅನ್ಸಾಫ್, ಕೆ. ಎಚ್. ತಾಖ್ ಸೇರಿದಂತೆ 15ಮಂದಿ ವಿರುದ್ಧ ಪೊಲೀಸರುಕೇಸು ದಾಖಲಿಸಿಕೊಮಡಿದ್ದಾರೆ. 

ಕುಂಬಳೆ ಠಾಣೆಯಲಲೂ ಕೇಸು:

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷೆ ರದ್ದುಗೊಳಿಸಿದ ಕ್ರಮ ಪ್ರತಿಭಟಿಸಿ ಎಂಎಸ್‍ಎಫ್ ನೇತೃತ್ವದಲ್ಲಿ  ಕುಂಬಳೆಯಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿ ಕುಂಬಳೆ ಠಾಣೆ ಪೆÇಲೀಸರು 15 ಮಂದಿ ಎಂಎಸ್‍ಎಫ್ ಕಾರ್ಯ ಕರ್ತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪೈಕಿ ಬಂದ್ಯೋಡು ಖಾಲಿದ್ ಮಂಜಿಲ್‍ನ ಮುಹಮ್ಮದ್ ಸುಫಾರಾರ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries