ಮುಳ್ಳೇರಿಯ: ಕೊಠಡಿಯೊಳಗೆ ಕೂಡಿ ಹಾಕಿ, ಬಳಿಕ ಮಾಲೆ ಪಟಾಕಿ ಸ್ಫೋಟಿಸಲಾಗಿದ್ದು, ಇದರಿಂದ ಯುವಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಮಲ್ಲ ಚೋಕೆಮೂಲೆ ನಿವಾಸಿ ಎಂ.ಅಭಿಲಾಷ್ (32) ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿ ಅಭಿಲಾಷ್ ನೀಡಿದ ದೂರಿನನ್ವಯ ಸ್ನೇಹಿತನಾದ ಮುಳ್ಳೇರಿಯದ ಪ್ರಣವ್ ಎಂಬಾತನ ವಿರುದ್ಧ ಬದಿಯಡ್ಕ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಎಪ್ರಿಲ್ 15ರಂದು ರಾತ್ರಿ 10ರಿಂದ 16ರಂದು ಬೆಳಿಗ್ಗೆ 8 ಗಂಟೆ ಮಧ್ಯೆ ಅಭಿಲಾಷ್‍ನನ್ನು ಮನೆಯೊಂದರ ಕೊಠಡಿಯೊಳಗೆ ಕೋಡಿ ಹಾಕಿ, ಬಳಿಕ ಅವರ ಸಮೀಪಕ್ಕೆ ಮಾಲೆ ಪಟಾಕಿ ಹಚ್ಚಿ ಎಸೆದಿರುವುದಾಗಿ ಪೆÇಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.

