ಮುಳ್ಳೇರಿಯ: ಬೆಳ್ಳೂರು ಪಂಚಾಯಿತಿ ಪಳ್ಳಪ್ಪಾಡಿಯಲ್ಲಿ ಗೃಹಿಣಿಯೊಬ್ಬರ ಮೃತದೇಹ ಮನೆ ಸಮೀಪದ ಶೆಡ್ಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪಳ್ಳಪ್ಪಾಡಿ ನಿವಾಸಿ ಜೈನುದ್ದೀನ್ ಎಂಬವರ ಪತ್ನಿ ಸೆರೀನಾ (27) ಮೃತಪಟ್ಟ ಮಹಿಳೆ.
ಮನೆ ಸಮೀಪದ ಶೆಡ್ಡಿನಲ್ಲಿ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಸೆರಿನಾ ಪತ್ತೆಯಾಗಿದ್ದು, ತಕ್ಷಣ ಮನೆಯವರು ಹಾಗೂ ಸ್ಥಳೀಯರು ನೇಣಿನಿಂದ ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶವಮಹಜರುನಡೆಸಲಾಯಿತು. ಪ್ರಕರಣದ ಬಗ್ಗೆ ಆದೂರು ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಪುತ್ತೂರು ತಾಲೂಕಿನ ಕೆಯ್ಯೂರು ಮಾಡಾವು ಸನಂಗಳ ನಿವಾಸಿ ಸೆರೀನಾ ಅವರ ವಿವಾಹ ಜೈನುದ್ದೀನ್ ನಡುವೆ ನಾಲ್ಕು ವರ್ಷಗಳ ಹಿಂದೆ ನಡೆದಿದ್ದು, ದಂಪತಿಗೆ ಮಕ್ಕಳಾಗಿರಲಿಲ್ಲ. ಇದರಿಂದ ಮನನೊಂದ ಗೃಹಿಣಿ ಆತ್ಮಹತ್ಯೆ ನಡೆಸಿರಬೇಕೆಂದು ಶಂಕಿಸಲಾಗಿದೆ.


