ಕುಂಬಳೆ: ಕುಂಬಳೆ ಪೋಲೀಸ್ ಠಾಣಾ ವ್ಯಾಪ್ತಿಯ ಪೆರ್ಮುದೆ ಸನಿಹದ ಪೆರಿಯಡ್ಕದಲ್ಲಿ ಸ್ಕೂಟರ್ ಮತ್ತು ಬೈಕ್ ಪರಸ್ಪರ ಡಿಕ್ಕಿಯಾಗಿ ಪುತ್ರ ಮೃತಪಟ್ಟಿದ್ದು, ತಂದೆ ಗಂಭೀರ ಗಾಐಗೊಂಡ ಘಟನೆ ನಡೆದಿದೆ. ಬಾಯಾರು ಚಿಪ್ಪಾರು ನೆತ್ತರಗುಳಿ ನಿವಾಸಿ ಎನ್. ಕಿಶನ್ (25) ಮೃತಪಟ್ಟ ವ್ಯಕ್ತಿ. ಇವರ ತಂದೆ ಮಾಧವ ದೇವಾಡಿಗ ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಿಶನ್ ಸ್ಕೂಟರ್ ಚಲಾಯಿಸುತ್ತಿದ್ದು ತಂದೆ ಮಾಧವ ದೇವಾಡಿಗ ಹಿಂಬದಿ ಕುಳಿತಿದ್ದರು. ಪೆರಿಯಡ್ಕ ಸನಿಹ ಎದುರಿನಿಂದ ಆಗಮಿಸಿದ್ದ ಬೈಕ್ ಮತ್ತು ಸ್ಕೂಟರ್ ಪರಸ್ಪರ ಡಿಕ್ಕಿಯಾಗಿ, ಅಪಘಾತ ಸಂಭವಿಸಿದೆ.


