ತಿರುವನಂತಪುರಂ: ಸಚಿವರ ಪಟ್ಟಿಯನ್ನು ಭಾನುವಾರ ಮಧ್ಯಾಹ್ನ 2 ಗಂಟೆಗೆ ರಾಜ್ಯಪಾಲರಿಗೆ ಹಸ್ತಾಂತರಿಸಲಾಗುವುದು. ದ್ವಿಪಕ್ಷೀಯ ಚರ್ಚೆಗಳು ಮುಂದುವರೆದಿವೆ. ಕೇರಳದ ಉಸ್ತುವಾರಿ ವಹಿಸಿರುವ ದೀಪಾ ದಾಸ್ ಮುನ್ಷಿ, ಭಾನುವಾರ ಬೆಳಿಗ್ಗೆಯೂ ಚರ್ಚೆಗಳು ಮುಂದುವರಿಯಲಿವೆ ಎಂದು ತಿಳಿಸಿರುವರು. ಪೂರ್ಣ ಸಂಪುಟದ ಪ್ರಮಾಣ ವಚನ ಸೋಮವಾರ ನಡೆಯಲಿದೆ.
ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರೇ ಯುಡಿಎಫ್ ಸಂಪುಟದಲ್ಲಿ ಹಣಕಾಸು ಇಲಾಖೆಯನ್ನು ಸಹ ನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ. ಗೃಹ ಇಲಾಖೆಯನ್ನು ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಅವರಿಗೆ ನೀಡಲಾಗುವುದು ಎಂದು ಒಪ್ಪಿಕೊಳ್ಳಲಾಗಿದೆ.
ಏತನ್ಮಧ್ಯೆ, ವಿ.ಡಿ. ಸತೀಶನ್ ಸಂಪುಟದಲ್ಲಿ ಸಚಿವ ಸ್ಥಾನಗಳನ್ನು ದೃಢಪಡಿಸಿದ ಎಂಟು ಕಾಂಗ್ರೆಸ್ ನಾಯಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸನ್ನಿ ಜೋಸೆಫ್, ಕೆ. ಮುರಳೀಧರನ್, ತಿರುವಾಂಜೂರ್ ರಾಧಾಕೃಷ್ಣನ್, ಎಪಿ ಅನಿಲ್‍ಕುಮಾರ್, ಪಿ.ಸಿ. ವಿಷ್ಣುನಾಥ್, ಎಂ. ಲಿಜು, ಬಿಂದು ಕೃಷ್ಣ ಮತ್ತು ಚಾಂಡಿ ಉಮ್ಮನ್ ಸಚಿವರಾಗಲಿದ್ದಾರೆ. ಇನ್ನೂ ಕೆಲವು ಹೆಸರುಗಳು ಬರಬೇಕಿದೆ.
ಈ ಮಧ್ಯೆ, ಮುಸ್ಲಿಂ ಲೀಗ್ ಕೋರಿಕೆಯಂತೆ ವಿ.ಡಿ. ಸತೀಶನ್ ಅವರ ಸಂಪುಟದಲ್ಲಿ ಐದು ಸಚಿವರನ್ನು ಹೊಂದಲು ನಿರ್ಧರಿಸಲಾಗಿದೆ. ಈ ಸಂಬಂಧ ಇಂದು ಅಧಿಕೃತ ಘೋಷಣೆ ಹೊರಬೀಳಲಿದೆ.

