ಕೊಚ್ಚಿ: ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪೋಲೀಸರು ರಸ್ತೆಯಲ್ಲಿ ವ್ಯಾಪಕ ವಾಹನ ತಪಾಸಣೆ ನಡೆಸಿದ್ದು, ಮುಕ್ತವಾಗಿ ತಿರುಗಾಡಬಹುದೆಂದು ಭಾವಿಸಿ ರಸ್ತೆಗಿಳಿದ ಎಲ್ಲರಿಗೂ ನೋಟೀಸ್ ನೀಡಲಾಗಿದೆ.
ಹೆಲ್ಮೆಟ್ ಇಲ್ಲದವರಿಗೆ ಹೆಚ್ಚಿನ ನೀಟೀಸ್ ಲಭಿಸಿದೆ. ಕುಡುಕರು ಸಹ ಸಿಕ್ಕಿಬಿದ್ದರು. ನಿನ್ನೆ ತಪಾಸಣೆಯನ್ನು ನಿರೀಕ್ಷಿಸಿರಲಿಲ್ಲ ಎಂದು ಜನರು ಹೇಳಿದರು.
ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೋಲೀಸ್ ಕಿರುಕುಳ ಕಡಿಮೆಯಾಗುತ್ತದೆ ಎಂದು ಹಲವರು ಭಾವಿಸಿದ್ದರು. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿಜಯೋತ್ಸವ ಆಚರಿಸಲು ಬಂದವರೂ ಸಹ ತಪಾಸಣೆಯಲ್ಲಿ ಸಿಕ್ಕಿಬಿದ್ದರು. ಹೆಚ್ಚಿನ ಜಿಲ್ಲೆಗಳಲ್ಲಿ ಇದೇ ರೀತಿಯ ತಪಾಸಣೆಗಳು ನಡೆದಿವೆ.
ಏತನ್ಮಧ್ಯೆ, ಗೃಹ ಸಚಿವ ರಮೇಶ್ ಚೆನ್ನಿತ್ತಲ ಪೋಲೀಸರ ಪ್ರಮುಖ ಬದಲಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಪೋಲೀಸ್ ಠಾಣೆಗಳ ಆಡಳಿತವನ್ನು ಮತ್ತೆ ಎಸ್‍ಐಗಳಿಗೆ ನೀಡುವ ಮತ್ತು ಹಳೆಯ ವೃತ್ತ ವ್ಯವಸ್ಥೆಯನ್ನು(ಸರ್ಕಲ್) ಮರಳಿ ತರುವ ಗುರಿಯನ್ನು ಗೃಹ ಇಲಾಖೆ ಹೊಂದಿದೆ.
ರಾಜ್ಯ ಪೋಲೀಸ್ ಮುಖ್ಯಸ್ಥ ರಾವಡ ಚಂದ್ರಶೇಖರ್ ಈ ನಿಟ್ಟಿನಲ್ಲಿ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಿದ್ದಾರೆ. ಡಿಜಿಪಿ ಇಂದು ನಿಯೋಜಿತ ಗೃಹ ಸಚಿವರನ್ನು ಭೇಟಿ ಮಾಡಲಿದ್ದಾರೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದು ಅತಿದೊಡ್ಡ ಆಡಳಿತ ಸುಧಾರಣೆಗಳಲ್ಲಿ ಒಂದಾಗಲಿದೆ.
ವರ್ಷಕ್ಕೆ 3,000 ಕ್ಕೂ ಹೆಚ್ಚು ಎಫ್‍ಐಆರ್‍ಗಳನ್ನು ನೋಂದಾಯಿಸುವ ದೊಡ್ಡ ಪೋಲೀಸ್ ಠಾಣೆಗಳಲ್ಲಿ ಮಾತ್ರ ಇನ್ಸ್‍ಪೆಕ್ಟರ್‍ಗಳು ಇನ್ನು ಎಸ್‍ಎಚ್‍ಒಗಳಾಗಿ ಮುಂದುವರಿಯುತ್ತಾರೆ.
ಸಾವಿರಕ್ಕಿಂತ ಕಡಿಮೆ ಎಫ್‍ಐಆರ್‍ಗಳನ್ನು ಪಡೆಯುವ ಸಾಮಾನ್ಯ ಠಾಣೆಗಳ (ಬಿ ಮತ್ತು ಸಿ ವರ್ಗಗಳು) ಆಡಳಿತವನ್ನು ಈಗ ಎಸ್‍ಐಗಳಿಗೆ ಹಸ್ತಾಂತರಿಸಲಾಗುವುದು. ಹೊಸ ವ್ಯವಸ್ಥೆಯೊಂದಿಗೆ, ಎರಡು ಪೋಲೀಸ್ ಠಾಣೆಗಳಿಗೆ ಒಬ್ಬ ಇನ್ಸ್‍ಪೆಕ್ಟರ್‍ನ ಹಳೆಯ ವ್ಯವಸ್ಥೆಯು ಪ್ರಮುಖ ಠಾಣೆಗಳನ್ನು ಹೊರತುಪಡಿಸಿ ಇತರ ಪ್ರದೇಶಗಳಲ್ಲಿ ಜಾರಿಗೆ ಬರಲಿದೆ.
ಬದಲಾವಣೆ ಮಾಡಿದಾಗ, ಉಳಿದ ವೃತ್ತ ನಿರೀಕ್ಷಕರನ್ನು ಸೈಬರ್ ಸೆಲ್ ಮತ್ತು ಪೋಕ್ಸೊ ವಿಭಾಗಗಳಂತಹ ವಿಶೇಷ ಇಲಾಖೆಗಳಿಗೆ ನಿಯೋಜಿಸಲಾಗುತ್ತದೆ.
ಹಿಂದಿನ ಸರ್ಕಾರದ ಅವಧಿಯಲ್ಲಿ, ರಾಜ್ಯದ 480 ಪೆÇಲೀಸ್ ಠಾಣೆಗಳಲ್ಲಿ ಸಿಐಗಳನ್ನು ಎಸ್‍ಎಚ್‍ಒಗಳಾಗಿ ನೇಮಿಸಲಾಗಿತ್ತು. ಈ ವ್ಯವಸ್ಥೆಯು ಈಗ ಬದಲಾಗುತ್ತಿದೆ.

