HEALTH TIPS

ಅಸಮಾಧಾನಗೊಂಡ್ರ ತರೂರ್? ಸತೀಶನ್ ಪ್ರಮಾಣವಚನಕ್ಕೆ ಗೈರು! ಕೇರಳ ಭವಿಷ್ಯದ ಬಗ್ಗೆ ಕಾಂಗ್ರೆಸ್ ಸಂಸದ ಕೊಟ್ಟ ಸುಳಿವೇನು?

ತಿರುವನಂತಪುರಂ: ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರು ಮೇ 18 ರಂದು ಅಧಿಕಾರ ಸ್ವೀಕರಿಸಲಿದ್ದಾರೆ. 140 ಸ್ಥಾನಗಳ ಪೈಕಿ 102 ಸ್ಥಾನಗಳನ್ನು ಗೆದ್ದು ಬೀಗುತ್ತಿರುವ ಯುಡಿಎಫ್ ಮೈತ್ರಿಕೂಟದ ಈ ಸಂಭ್ರಮದ ಕ್ಷಣಕ್ಕೆ ಕಾಂಗ್ರೆಸ್‌ನ ಪ್ರಭಾವಿ ನಾಯಕ ಶಶಿ ತರೂರ್ ಸಾಕ್ಷಿಯಾಗುತ್ತಿಲ್ಲ.

ತರೂರ್ ಅವರ ಅಲಭ್ಯತೆಯ ಹಿಂದೆ ರಾಜಕೀಯ ಕಾರಣಗಳಿವೆಯೇ ಅಥವಾ ವೈಯಕ್ತಿಕ ಕಾರ್ಯಕ್ರಮವೇ ಎಂಬ ಕುತೂಹಲಕ್ಕೆ ಸ್ವತಃ ತರೂರ್ ಅವರೇ ತೆರೆ ಎಳೆದಿದ್ದಾರೆ.

ಬಾಸ್ಟನ್‌ನಲ್ಲಿ ತರೂರ್: 50 ವರ್ಷಗಳ ಬಳಿಕ ಹಳೆಯ ನೆನಪು!

ಈ ಕುರಿತು Xನಲ್ಲಿ ಮಾಹಿತಿ ಹಂಚಿಕೊಂಡಿರುವ ಶಶಿ ತರೂರ್, ನನ್ನ ಸಹೋದ್ಯೋಗಿ ಮತ್ತು ಕೇರಳದ ನೂತನ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗದಿರುವುದಕ್ಕೆ ವಿಷಾದಿಸುತ್ತೇನೆ. ನಾನು ಈ ವಾರಾಂತ್ಯದಲ್ಲಿ ಅಮೆರಿಕದ ಬಾಸ್ಟನ್‌ನಲ್ಲಿ ಇರಲಿದ್ದೇನೆ ಎಂದು ತಿಳಿಸಿದ್ದಾರೆ. ತರೂರ್ ಅವರು ಓದಿದ ಪ್ರತಿಷ್ಠಿತ ಫ್ಲೆಚರ್ ಸ್ಕೂಲ್ ಆಫ್ ಲಾ ಅಂಡ್ ಡಿಪ್ಲೊಮಸಿಯಲ್ಲಿ (ಟಫ್ಟ್ಸ್ ವಿಶ್ವವಿದ್ಯಾಲಯ) ಘಟಿಕೋತ್ಸವ ಭಾಷಣ ಮಾಡಲು ಅವರಿಗೆ ಆಹ್ವಾನ ನೀಡಲಾಗಿದೆ. ಅಷ್ಟೇ ಅಲ್ಲದೆ, ಅವರ ಪದವಿ ಶಿಕ್ಷಣ ಮುಗಿದು 50 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮದಲ್ಲೂ ಅವರು ಭಾಗವಹಿಸುತ್ತಿದ್ದಾರೆ. ಅಮೆರಿಕದಲ್ಲಿ ಹಳೆಯ ನೆನಪುಗಳನ್ನು ಸಂಭ್ರಮಿಸುತ್ತಲೇ, ಕೇರಳದ ಭವಿಷ್ಯಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ ಎಂಬ ಅವರ ಸಾಲುಗಳು ಈಗ ರಾಜಕೀಯ ವಲಯದಲ್ಲಿ ಹೊಸ ಅರ್ಥಗಳನ್ನು ಹುಟ್ಟುಹಾಕಿವೆ.

ಸಿಎಂ ಕುರ್ಚಿಗೆ ಸತೀಶನ್ ಆಯ್ಕೆಯಾಗಿದ್ದು ಹೇಗೆ..?

ಕೇರಳ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ 63 ಸ್ಥಾನಗಳನ್ನು ಗೆದ್ದಿದ್ದರೆ, ಮಿತ್ರಪಕ್ಷಗಳಾದ ಐಯುಎಂಎಲ್ (22), ಕೇರಳ ಕಾಂಗ್ರೆಸ್ (8) ಮತ್ತು ಆರ್​ಎಸ್​ಪಿ (3) ಸ್ಥಾನಗಳನ್ನು ಗೆದ್ದಿವೆ. ಮೇ 7 ರಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕನ ಆಯ್ಕೆಯನ್ನು ಹೈಕಮಾಂಡ್‌ಗೆ ಬಿಡಲಾಗಿತ್ತು. ಈ ರೇಸ್‌ನಲ್ಲಿ ಕೆ.ಸಿ. ವೇಣುಗೋಪಾಲ್ ಅವರ ಹೆಸರು ಮುಂಚೂಣಿಯಲ್ಲಿದ್ದರೂ, ಅಂತಿಮವಾಗಿ ಹೈಕಮಾಂಡ್ ವಿ.ಡಿ. ಸತೀಶನ್ ಅವರ ಹೆಸರನ್ನು ಘೋಷಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಹೈಕಮಾಂಡ್ ನಿರ್ಧಾರಕ್ಕೆ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ಕೇರಳದ ಜನರ ತೀರ್ಪನ್ನು ಗೌರವಿಸುವುದಾಗಿ ತಿಳಿಸಿದ್ದಾರೆ. ಎಡರಂಗದ (LDF) ಕೋಟೆಯನ್ನು ಭೇದಿಸಿ ಯುಡಿಎಫ್ ಈ ಬಾರಿ ಬೃಹತ್ ಬಹುಮತ ಪಡೆದಿರುವುದು ರಾಷ್ಟ್ರ ರಾಜಕಾರಣದಲ್ಲೂ ಕಾಂಗ್ರೆಸ್‌ಗೆ ಆನೆಬಲ ತಂದಿದೆ.

ಕೇರಳದ ಭವಿಷ್ಯ ಮತ್ತು ತರೂರ್ ನಡೆ

ಶಶಿ ತರೂರ್ ಅವರು ಕಳೆದ ಕೆಲವು ಸಮಯದಿಂದ ಕೇರಳ ರಾಜ್ಯ ರಾಜಕಾರಣದಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಸತೀಶನ್ ಅವರಿಗೆ ಶುಭ ಕೋರುವ ಸಂದರ್ಭದಲ್ಲೂ ಕೇರಳದ ಭವಿಷ್ಯದತ್ತ ನನ್ನ ನೋಟ ಎಂದು ಹೇಳಿರುವುದು, ಮುಂದಿನ ದಿನಗಳಲ್ಲಿ ತರೂರ್ ಅವರು ರಾಜ್ಯ ರಾಜಕಾರಣದಲ್ಲಿ ದೊಡ್ಡ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ,

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries