HEALTH TIPS

ಇಂಧನ ಬೆಲೆಯೇರಿಕೆ ವಿರುದ್ಧ ಕುಂಬಳೆಯಲ್ಲಿ ಮಂಡಲ ಕಾಂಗ್ರೆಸ್‍ನಿಂದ ಪ್ರತಿಭಟನೆ

ಕುಂಬಳೆ: ಕೇಂದ್ರ ಸರ್ಕಾರ ದೇಶದಲ್ಲಿ ತೀವ್ರ ಇಂಧನ ಬೆಲೆ ಹೆಚ್ಚಳಕ್ಕೆ, ಆ ಮೂಲಕ ಅಗತ್ಯ ಸಾಮಗ್ರಿಗಳ ಬೆಲೆ ಹೆಚ್ಚಳಕ್ಕೆ, ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸಿರುವುದಾಗಿ  ಡಿಸಿಸಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಪ್ರಭು ಅಭಿಪ್ರಾಯಪಟ್ಟರು. 


ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ವಿರುದ್ಧ ಕೆಪಿಸಿಸಿ ಆಹ್ವಾನ ಪ್ರಕಾರ ಕುಂಬಳೆ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಡೆಸಿದ ಪ್ರತಿಭಟನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕರ್ಷಕ ಕಾಂಗ್ರೆಸ್ ಬ್ಲಾಕ್ ಕಾರ್ಯದರ್ಶಿ ಲೋಕನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಮಂಡಲ ಕಾಂಗ್ರೆಸ್ ಅಧ್ಯಕ್ಷ ರವಿ ಪೂಜಾರಿ ಸ್ವಾಗತಿಸಿದರು. ಬ್ಲಾಕ್ ಪಂಚಾಯತಿ ಸದಸ್ಯ ಪೃಥ್ವಿರಾಜ್ ಶೆಟ್ಟಿ, ನಾಸರ್ ಮೊಗ್ರಾಲ್, ರಿಯಾಸ್ ಮೊಗ್ರಾಲ್, ಸಿ.ಎಂ. ಹಂಸ, ರಮೇಶ್ ಗಾಂಧಿನಗರ್, ಕೆ.ಎಸ್. ಇಬ್ರಾಹಿಂ, ಲತೀಫ್ ಆರಿಕ್ಕಾಡಿ, ಡಾಲ್ಫಿನ್ ಡಿಸೋಜ, ಉಮೇಶ್ ಮಾಸ್ಟರ್, ಕೇಶವ ದರ್ಬಾರ್‍ಕಟ್ಟೆ, ಚಂದ್ರ, ಪದ್ಮನಾಭ ಬಂಬ್ರಾಣ, ಥೋಮಸ್ ಡಿಸೋಜ ಭಾಗವಹಿಸಿದರು. ರವಿರಾಜ್ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries