ಅದೇ ವೇಳೆ, ಅತ್ಯಾಚಾರ ಸಂತ್ರಸ್ತೆಯರು ತಮ್ಮ ಇಷ್ಟವಿಲ್ಲದ 20 ವಾರಗಳನ್ನು ಮೀರಿದ ಗರ್ಭವನ್ನೂ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸುವಂತೆ ಕಾನೂನಿನಲ್ಲಿ ತಿದ್ದುಪಡಿ ಮಾಡುವುದನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕು ಎಂದು ನ್ಯಾಯಾಲಯ ಸೂಚಿಸಿತು.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ ಮಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠ, ಅತ್ಯಾಚಾರದಿಂದ ಗರ್ಭಧಾರಣೆಯಾಗುವ ಪ್ರಕರಣಗಳಲ್ಲಿ ಸಮಯದ ಮಿತಿ ಇರಬಾರದು ಎಂದು ಅಭಿಪ್ರಾಯಪಟ್ಟಿತು.
ಗರ್ಭಪಾತ ಸಾಧ್ಯವಿಲ್ಲವೆಂದು ಹೊಸದಿಲ್ಲಿಯ ಏಮ್ಸ್ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ತುರ್ತು ಮನವಿ ಮಾಡಿದಾಗ, "ಕಾನೂನು ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕು" ಎಂದು ನ್ಯಾಯಪೀಠ ಹೇಳಿತು.
ಇದು ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರದ ಪ್ರಕರಣವಾಗಿರುವುದರಿಂದ, ಗರ್ಭಪಾತಕ್ಕೆ ಅವಕಾಶ ನೀಡದಿದ್ದರೆ ಸಂತ್ರಸ್ತೆಯು ಜೀವನಪೂರ್ತಿ ಆಘಾತ ಮತ್ತು ಮಾನಸಿಕ ಗಾಯದಿಂದ ನರಳಬೇಕಾಗುತ್ತದೆ ಎಂಬುದರತ್ತ ನ್ಯಾಯಾಲಯ ಗಮನ ಸೆಳೆಯಿತು.
ತಾಯಿಗೆ ಶಾಶ್ವತ ಅಂಗವೈಕಲ್ಯ ಉಂಟಾಗುವ ಸಾಧ್ಯತೆ ಇಲ್ಲದಿದ್ದರೆ ಗರ್ಭಪಾತವನ್ನು ನಡೆಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿತು.
ಇದೇ ವೇಳೆ, ಸಂತ್ರಸ್ತೆಯ ಪೋಷಕರೊಂದಿಗೆ ಸಮಗ್ರ ಸಮಾಲೋಚನೆ ನಡೆಸಿ, ಸಂಬಂಧಿತ ವ್ಯಕ್ತಿಯ ಅಭಿಪ್ರಾಯದ ಆಧಾರದ ಮೇಲೆ ತೀರ್ಮಾನ ಕೈಗೊಳ್ಳುವಂತೆ ಹೊಸದಿಲ್ಲಿಯ ಏಮ್ಸ್ ಗೆ ನ್ಯಾಯಪೀಠ ಸೂಚನೆ ನೀಡಿತು.

