ಎಕ್ಸ್‌ನಲ್ಲಿ ಸುಮಾರು ಒಂದು ಗಂಟೆಯ ಅವಧಿಯಲ್ಲೇ ಅದು 21,000ಕ್ಕೂ ಅಧಿಕ ಫಾಲೋವರ್‌ಗಳನ್ನು ಪಡೆದುಕೊಂಡಿದೆ. ಈ ಖಾತೆಯ ಪ್ರೊಫೈಲ್‌ನಲ್ಲಿ 'ಕಾಕ್ರೋಚ್ ಡಸ್‌ಂಟ್ ಡೈ!' (ಜಿರಳೆ ಸಾಯುವುದಿಲ್ಲ!) ಎಂಬುದಾಗಿ ಬರೆಯಲಾಗಿದೆ.
ಹೊಸ ಖಾತೆಯ ಮೊದಲ ಸಂದೇಶ ಹೀಗಿದೆ: ''ನಮ್ಮನ್ನು ನಿರ್ಮೂಲನ ಮಾಡಬಹುದು ಎಂದು ನೀವು ಭಾವಿಸಿದ್ದೀರಾ? ನಗೆ ಬರುತ್ತಿದೆ''.
ಹೆಸರಿಗಾಗಿ ಮೂರು ಅರ್ಜಿ!
'ಕಾಕ್ರೋಚ್ ಜನತಾ ಪಾರ್ಟಿ' ಹೆಸರಿನ ನೋಂದಾವಣೆಗಾಗಿ ಕನಿಷ್ಠ ಮೂರು ಅರ್ಜಿಗಳನ್ನು ಸಲ್ಲಿಸಲಾಗಿದೆ.
'ಕಾಕ್ರೋಚ್ ಜನತಾ ಪಾರ್ಟಿ' ಎಂಬ ವಿಡಂಬನಾತ್ಮಕ ರಾಜಕೀಯ ಗುಂಪು ಅಸ್ತಿತ್ವಕ್ಕೆ ಬಂದ ಬಳಿಕ ಈ ಬೆಳವಣಿಗೆ ನಡೆದಿದೆ.
ಅಝಿಮ್ ಆದಮ್‌ಭಾಯಿ ಜಾಮ್ ಮತ್ತು ಅಕಾಂಡ್ ಸ್ವರೂಪ್ ಎಂಬ ಇಬ್ಬರು ವ್ಯಕ್ತಿಗಳು ಹಾಗೂ ದೀಪ್ಕೇಸ್ ಕಾಕ್ರೋಚ್ ಜನತಾ ಪಾರ್ಟಿ ಎಂಬ ಗುಂಪು ಪತ್ಯೇಕ ಅರ್ಜಿಗಳನ್ನು ಸಲ್ಲಿಸಿವೆ ಎಂದು ನೋಂದಣಿ ಕಚೇರಿಯ ವೆಬ್‌ಸೈಟ್ ತಿಳಿಸಿದೆ.
ಭಾರತದ ಮುಖ್ಯ ನ್ಯಾಯಾಧೀಶ ನ್ಯಾ. ಸೂರ್ಯ ಕಾಂತ್‌ರ 'ಜಿರಳೆ' ಹೇಳಿಕೆಯಿಂದ ಹುಟ್ಟಿಕೊಂಡ ರಾಜಕೀಯ ವಿಡಂಬನಾತ್ಮಕ ಸಾಮಾಜಿಕ ಮಾಧ್ಯಮ ಅಭಿಯಾನ ಈಗ ಪೂರ್ಣ ಪ್ರಮಾಣದ ರಾಜಕೀಯ ಸಂಘಟನೆಯಾಗಿ ಮಾರ್ಪಟ್ಟಿದೆ. ಹಲವು ಪ್ರತಿಪಕ್ಷ ನಾಯಕರು ಈ ಗುಂಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಅದು ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಭಾರೀ ಪ್ರಸಿದ್ಧಿ ಗಳಿಸಿದೆ. ಅದು ಇನ್‌ಸ್ಟಾಗ್ರಾಮ್‌ನಲ್ಲಿ ಬಿಜೆಪಿಯ ಫಾಲೋವರ್‌ಗಳ ಸಂಖ್ಯೆಯನ್ನೂ ಹಿಂದಿಕ್ಕಿದೆ.
ಇತ್ತೀಚಿನ ಸಂದರ್ಶನವೊಂದರಲ್ಲಿ, ಸ್ಥಾಪಕ ಅಭಿಜಿತ್ ದೀಪ್ಕೆ ಆನ್‌ಲೈನ್ ಅಭಿಯಾನದ ಜನಪ್ರಿಯತೆ, ಅದರ ಕಾರ್ಯಸೂಚಿ ಮತ್ತು ತಾನು ಭಾರತಕ್ಕೆ ವಾಪಸಾದರೆ ಎದುರಿಸುತ್ತಿರುವ ಅಪಾಯದ ಬಗ್ಗೆ ಮಾತನಾಡಿದ್ದಾರೆ.
ಅವರೀಗ ಅಮೆರಿಕದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ''ಈ ದೇಶದಲ್ಲಿ ತಮ್ಮನ್ನು ಜಿರಳೆಗಳಾಗಿ ನೋಡಲಾಗುತ್ತಿದೆ ಎನ್ನುವುದು ನಮಗೆ ಕೊನೆಗೂ ಗೊತ್ತಾಗಿದೆ'' ಎಂದು ಅವರು ದ ರೆಡ್ ಮೈಕ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ದಿಲ್ಲಿ ವಿಮಾನ ನಿಲ್ದಾಣದಲ್ಲಿ ಇಳಿದ ಕೂಡಲೇ ನನ್ನನ್ನು ಬಂಧಿಸುತ್ತಾರೆ ಎಂಬುದಾಗಿಯೂ ಅವರು ಈ ಸಂದರ್ಭದಲ್ಲಿ ಹೇಳಿದರು.
''ನಾನು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಇಳಿದ ಕೂಡಲೇ, ದಿಲ್ಲಿ ಪೊಲೀಸರ ಒಂದು ಪಟಾಲಮ್ ನನ್ನನ್ನು ನೇರವಾಗಿ ತಿಹಾರ್ ಜೈಲಿಗೆ ಒಯ್ಯುತ್ತದೆ'' ಎಂದು ದೀಪ್ಕೆ ಹೇಳಿದರು.

