HEALTH TIPS

ಇಂದು ಮಲ್ಲ ಕ್ಷೇತ್ರದಲ್ಲಿ 'ಶತಚಂಡಿಕಾ ಯಾಗದ ಪೂರ್ಣಾಹುತಿ': ಶೃಂಗೇರಿ ಜಗದ್ಗುರುಗಳ ದಿವ್ಯ ಉಪಸ್ಥಿತಿ

ಮುಳ್ಳೇರಿಯ: ಶೃಂಗೇರಿ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಜಗದ್ಗುರು  ಶ್ರೀ ಭಾರತೀ ತೀರ್ಥ ಪಾದಂಗಳವರ ತತ್ಕರಕಮಲ ಸಂಜಾತ  ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಸೋಮವಾರ ಸಂಜೆ ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ  ಚಿತ್ತೈಸಿದರು. 

12ರಂದು ಬೆಳಗ್ಗೆ 11ಕ್ಕೆ ಜಗದ್ಗುರು  ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ದಿವ್ಯಸಾನ್ನಿಧ್ಯದಲ್ಲಿ 'ಶತಚಂಡಿಕಾ ಯಾಗದ ಪೂರ್ಣಾಹುತಿ',  ಗುರುದರ್ಶನ, ಪಾದುಕಾಪೂಜೆ, ಭಿಕ್ಷಾವಂದನೆ, ಫಲಮಂತ್ರಾಕ್ಷತೆ, ರಾತ್ರಿ ಗುರುದರ್ಶನ, ಪಾದುಕಾಪೂಜೆ, ಶ್ರೀ ಚಂದ್ರಮೌಳೀಶ್ವರ ದೇವರ ಪೂಜೆ ನಡೆಯುವುದು. 

13ರಂದು ಬೆಳಗ್ಗೆ 9.30ಕ್ಕೆ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ಅಮೃತಹಸ್ತಗಳಿಂದ ಶ್ರೀ ಸತ್ಯನಾರಾಯಣ ದೇವರಿಗೆ ಲಕ್ಷಾರ್ಚನಾ ಕಲಶಾಭಿಷೇಕ, 

ಅನುಗ್ರಹ ಭಾಷಣ, ಶ್ರೀಗುರುದರ್ಶನ, ಪಾದುಕಾಪೂಜೆ, ಗುರುಕಾಣಿಕೆ, ಫಲಮಂತ್ರಾಕ್ಷತೆ ನಡೆಯುವುದು. 13ರಂದು ಸಂಜೆ ಶ್ರೀಗಳು ಸುಳ್ಯಕ್ಕೆ ನಿರ್ಗಮಿಸಲಿರುವರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries