ರಾಜ್ಯದಲ್ಲಿ ಬಿಸಿಲ ಧಗೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜನರು ಮನೆಯಿಂದ ಹೊರಹೋಗಲು ಸಂಕಷ್ಟ ಪಡುತ್ತಿದ್ದಾರೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಚರ್ಮದ ಸಮಸ್ಯೆಯಾಗಿ ಸಣ್ಣ ಕೆಂಪು ಗುಳ್ಳೆಗಳು ಬೀಳುತ್ತದೆ. ಇದರು ವಿಪರೀತ ತುರಿಕೆ ಹಾಗೂ ಉರಿಯನ್ನು ಉಂಟು ಮಾಡುತ್ತದೆ.
ಇನ್ನೂ ಈ ಗುಳ್ಳೆಗೆ ಸರಳವಾದ ಮತ್ತು ಪರಿಣಾಮಕಾರಿಯಾದ ಮನೆಮದ್ದುಗಳು ಇಲ್ಲಿದೆ.
ಬೆವರು ಕಜ್ಜಿ ಇರುವ ಜಾಗಕ್ಕೆ ತಣ್ಣೀರು ಅಥವಾ ಐಸ್ ಕ್ಯೂಬ್‌ಗಳನ್ನು ಬಟ್ಟೆಯಲ್ಲಿ ಸುತ್ತಿ ಮೃದುವಾಗಿ ಒತ್ತಿಕೊಳ್ಳಿ. ಇದು ಉರಿ ಮತ್ತು ತುರಿಕೆಯನ್ನು ತಕ್ಷಣವೇ ಕಡಿಮೆ ಮಾಡುತ್ತದೆ.
ಶ್ರೀಗಂಧದ ಪುಡಿಯನ್ನು ಪನ್ನೀರಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ ಕಜ್ಜಿಯಾದ ಜಾಗಕ್ಕೆ ಹಚ್ಚಿ. ಇದು ಚರ್ಮವನ್ನು ತಂಪಾಗಿಸುತ್ತದೆ ಮತ್ತು ಬ್ಯಾಕ್ಟೀರಿಯಾಗಳನ್ನು ತಡೆಯುತ್ತದೆ.
ಇನ್ನೂ ಕಜ್ಜಿ ಇರುವ ಜಾಗಕ್ಕೆ ಅಲೋವೆರಾ ಜೆಲ್ ಅನ್ನು ಹಚ್ಚುವುದರಿಂದಲೂ ಚರ್ಮದ ಕಿರಿಕಿರಿಯನ್ನು ದೂರಾ ಮಾಡಬಹುದು.

