HEALTH TIPS

ನೊಬೆಲ್ ಪುರಸ್ಕೃತೆ ನರ್ಗಿಸ್ ಮೊಹಮ್ಮದಿ ಆರೋಗ್ಯ ಗಂಭೀರ: ಕುಟುಂಬದ ಆರೋಪ

ಟೆಹರಾನ್: ಬಂಧನದಲ್ಲಿರುವ ನೊಬೆಲ್ ಪುರಸ್ಕೃತೆ ಹಾಗೂ ಮಾನವಹಕ್ಕು ಹೋರಾಟಗಾರ್ತಿ ನರ್ಗಿಸ್ ಮೊಹಮ್ಮದಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಉತ್ತಮ ಚಿಕಿತ್ಸೆಗೆ ಟೆಹರಾನ್ ಆಸ್ಪತ್ರೆಗೆ ಸ್ಥಳಾಂತರಿಸಲು ಭದ್ರತಾ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದು ಅವರ ಕುಟುಂಬ ಆರೋಪಿಸಿದೆ.

ವೈದ್ಯರು ಅವರನ್ನು ಟೆಹರಾನ್‌ ಗೆ ವರ್ಗಾಯಿಸುವಂತೆ ಈ ಹಿಂದೆಯೇ ಶಿಫಾರಸು ಮಾಡಿದ್ದರೂ, ಅದನ್ನು ತಡೆಹಿಡಿಯಲಾಗಿದೆ ಎಂದು ಒಸ್ಲೊದಲ್ಲಿ ನೆಲೆಸಿರುವ ಅವರ ಸಹೋದರ ಹಮೀದ್‌ ರೆಝಾ ಮೊಹಮ್ಮದಿ ತಿಳಿಸಿದ್ದಾರೆ.

''ಬೇಹುಗಾರಿಕಾ ಸಂಸ್ಥೆಗಳು ಆಡಳಿತ ವ್ಯವಸ್ಥೆಯ ಮೇಲೆ ಮೇಲುಗೈ ಸಾಧಿಸಿದ್ದು, ಎಲ್ಲವನ್ನೂ ಅವೇ ನಿಯಂತ್ರಿಸುತ್ತಿವೆ'' ಎಂದು ಅವರು ಅಸೋಸಿಯೇಟೆಡ್ ಪ್ರೆಸ್ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

53 ವರ್ಷದ ನರ್ಗಿಸ್ ಮೊಹಮ್ಮದಿ ಅವರಿಗೆ ಮಾನವಹಕ್ಕುಗಳ ಪರ ಹೋರಾಟಕ್ಕಾಗಿ 2023ರಲ್ಲಿ ಜೈಲಿನಲ್ಲಿರುವಾಗಲೇ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿತ್ತು. ತಮ್ಮ ವೃತ್ತಿಜೀವನದ ಬಹುಭಾಗವನ್ನು ಅವರು ಕಾರಾಗೃಹದಲ್ಲೇ ಕಳೆದಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಉತ್ತರ ಇರಾನ್‌ ನ ಮಶಾದ್ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವೇಳೆ ಅವರನ್ನು ಬಂಧಿಸಲಾಗಿತ್ತು.

ಮಾರ್ಚ್‌ನಲ್ಲಿ ಅವರಿಗೆ ತೀವ್ರ ಹೃದಯಾಘಾತವಾಗಿದ್ದು, ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಸೂಕ್ತ ಚಿಕಿತ್ಸೆ ನೀಡಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ ಎಂದು ಕುಟುಂಬ ಸದಸ್ಯರು ಹಾಗೂ ಅವರ ವಕೀಲರು ಆರೋಪಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries