HEALTH TIPS

ಕೇರಳ ಮುಖ್ಯಮಂತ್ರಿ ಆಯ್ಕೆ ಹೈಕಮಾಂಡ್‌ ಅಂಗಳಕ್ಕೆ

 ತಿರುವನಂತಪುರ: ಕೇರಳ  ಕಾಂಗ್ರೆಸ್‌ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನೂತನ ನಾಯಕನನ್ನು ಆಯ್ಕೆ ಮಾಡುವ ಅಧಿಕಾರವನ್ನು ಎಐಸಿಸಿ ಅಧ್ಯಕ್ಷರ ವಿವೇಚನೆಗೆ ಬಿಡುವ ನಿರ್ಣಯವನ್ನು ಇಲ್ಲಿ ನಡೆದ ಸಭೆಯಲ್ಲಿ ಕೈಗೊಳ್ಳಲಾಯಿತು.


ಎಐಸಿಸಿ ವೀಕ್ಷಕರಾದ ಮುಕುಲ್ ವಾಸ್ನಿಕ್ ಮತ್ತು ಅಜಯ್‌ ಮಾಕನ್‌ ಅವರು ಗುರುವಾರ ಕಾಂಗ್ರೆಸ್‌ ಶಾಸಕರೊಂದಿಗೆ ಸಭೆ ನಡೆಸಿ, ಅಭಿಪ್ರಾಯ ಪಡೆದುಕೊಂಡರು.

ಸಭೆಯ ಬಳಿಕ ಮಾತನಾಡಿದ ವಾಸ್ನಿಕ್‌, 'ನಮ್ಮ ಸಹೋದ್ಯೋಗಿಗಳು ಮತ್ತು ಪಕ್ಷದ ಶಾಸಕರೊಂದಿಗೆ ಸಭೆ ನಡೆಸಿದ್ದೇವೆ. ಸಿಎಲ್‌ಪಿ ಮುಖಂಡನ ಆಯ್ಕೆಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಸಣ್ಣಿ ಜೋಸೆಫ್‌ ನಿರ್ಣಯ ಮಂಡಿಸಿದರು, ಇದನ್ನು ವಿ.ಡಿ ಸತೀಶನ್‌ ಬೆಂಬಲಿಸಿದರು. ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲಾಗಿದೆ. ವರದಿಯನ್ನು ಹೈಕಮಾಂಡ್‌ಗೆ ಸಲ್ಲಿಸಲಾಗುವುದು. ಮುಂದಿನ ಸಿಎಲ್‌ಪಿ ಮುಖಂಡನ ಆಯ್ಕೆಯನ್ನು ಎಐಸಿಸಿ ಅಧ್ಯಕ್ಷರು ಅಂತಿಮಗೊಳಿಸಲಿದ್ದಾರೆ' ಎಂದರು.

'ಕೇರಳಂನ ಮುಂದಿನ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಎಐಸಿಸಿ ವೀಕ್ಷಕರು ತೆಗೆದುಕೊಂಡ ನಿರ್ಧಾರ ಸರಳ ಅಥವಾ ಕಠಿಣವಾಗಿತ್ತೇ' ಎಂಬ ಸುದ್ದಿಗಾರರ ಪ್ರಶ್ನೆಗೆ ವಾಸ್ನಿಕ್‌ ಸ್ಪಷ್ಟವಾದ ಉತ್ತರ ನೀಡಲಿಲ್ಲ.

ವೀಕ್ಷಕರು ಶಾಸಕರೊಂದಿಗೆ ವೈಯಕ್ತಿಕವಾಗಿ ಸಭೆ ನಡೆಸಿ, 'ನಾಯಕತ್ವ' ವಿಚಾರದಲ್ಲಿ ಅಭಿಪ್ರಾಯ ದಾಖಲಿಸಿಕೊಂಡರು. ಕಾಂಗ್ರೆಸ್ ಮುಖಂಡರಾದ ವಿ.ಎಂ ಸುಧೀರನ್‌, ಕೆ. ಸುಧಾಕರನ್‌, ರಮೇಶ್‌ ಚೆನ್ನಿತ್ತಲ ಮತ್ತು ವಿ.ಡಿ ಸತೀಶನ್‌ ಅವರೊಂದಿಗೂ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಯುಡಿಎಫ್‌ನ ಮಿತ್ರ ಪಕ್ಷಗಳ ಮುಖಂಡರೊಂದಿಗೂ ವೀಕ್ಷಕರು ಚರ್ಚೆ ನಡೆಸಿದರು.

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 63 ಸ್ಥಾನಗಳನ್ನು ಗೆದ್ದುಕೊಂಡಿದೆ. ವಿ.ಡಿ ಸತೀಶನ್‌, ರಮೇಶ್‌ ಚೆನ್ನಿತ್ತಲ ಮತ್ತು ಕೆ.ಸಿ ವೇಣುಗೋಪಾಲ್‌ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸ್ಪರ್ಧಾ ಕಣದಲ್ಲಿ ಮುಂಚೂಣಿಯಲ್ಲಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries