ನವದೆಹಲಿ: ಇತ್ತೀಚೆಗಷ್ಟೇ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ನೇಮಕವಾಗಿರುವ ನಿತಿನ್ ನವೀನ್ ಅವರು ನಾಲ್ಕು ರಾಜ್ಯಗಳ ತಮ್ಮ ಪಕ್ಷಕ್ಕೆ ಹೊಸ ರಾಜ್ಯಾಧ್ಯಕ್ಷರನ್ನು ನೇಮಿಸಿದ್ದಾರೆ.
ದೆಹಲಿ ಬಿಜೆಪಿಗೆ ಕೇಂದ್ರ ಸಚಿವ ಹಾಗೂ ದೆಹಲಿ ಪಶ್ಚಿಮ ಸಂಸದ ಹರ್ಷ ಮಲ್ಹೋತ್ರಾ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
ವಿರೇಂದ್ರ ಸಚ್‌ದೇವ್ ಅವರ ಸ್ಥಾನವನ್ನು ಬದಲಾಯಿಸಲಾಗಿದೆ.
ಹರಿಯಾಣ ಬಿಜೆಪಿ ಹೊಣೆಯನ್ನು ಮಹಿಳೆಗೆ ವಹಿಸಲಾಗಿದೆ. ಹರಿಯಾಣದ ಉದಯೋನ್ಮುಖ ಬಿಜೆಪಿ ನಾಯಕಿ ಅರ್ಚನಾ ಗುಪ್ತಾ ಅವರಿಗೆ ರಾಜ್ಯಾಧ್ಯಕ್ಷರಾಗುವ ಅವಕಾಶ ಸಿಕ್ಕಿದೆ.
2024 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಸರ್ದಾರ್ ಕೇವಲ್ ಸಿಂಗ್ ದಿಲ್ಲೋನ್ ಅವರಿಗೆ ಪಂಜಾಬ್ ಬಿಜೆಪಿ ರಾಜ್ಯಾಧ್ಯಕ್ಷರಾಗುವ ಅವಕಾಶ ಸಿಕ್ಕಿದೆ. ಜಾಟ್ ಮತಗಳ ಮೇಲೆ ಕಣ್ಣಿಟ್ಟು ನಿತಿನ್ ನವೀನ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ತ್ರಿಪುರಾ ರಾಜ್ಯಕ್ಕೆ ಅಶೋಕ್ ದೇವರಾಯ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಬಿಜೆಪಿ ನೇಮಿಸಿದೆ.

