HEALTH TIPS

ಭಾರತದ ಪ್ರತಿ ಭಾಗವೂ ಪವಿತ್ರ: ಮೋದಿ

ನವದೆಹಲಿ (PTI): 'ಭಾರತದ ಪ್ರತಿಯೊಂದು ಭಾಗವು ಪವಿತ್ರವಾದುದು' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಉಲ್ಲೇಖಿಸಿದ್ದಾರೆ.

ಸೋಮನಾಥ ದೇಗುಲವು ಜೀರ್ಣೋದ್ಧಾರಗೊಂಡು ಭಕ್ತರಿಗೆದರ್ಶನ ನೀಡಲಿಕ್ಕಾಗಿ ಪುನರಾರಂಭಗೊಂಡ 75ನೇ ವಾರ್ಷಿಕೋತ್ಸವದ (ಮೇ 11) ಅಂಗವಾಗಿ ಬರೆದಿರುವ ಲೇಖನದಲ್ಲಿ ಪ್ರಧಾನಿಯು ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ.

'ಭೌಗೋಳಿಕತೆಯನ್ನು ಮೀರಿದ ಏಕತೆಯ ಪ್ರಜ್ಞೆಯಿಂದ ಭಾರತ ಒಂದಾಗಿದೆ' ಎಂದಿರುವ ಮೋದಿ, 'ವಿಭಜನೆಗಳಿಂದ ಗುರುತಿಸಲ್ಪಟ್ಟಿರುವ ಜಗತ್ತಿನಲ್ಲಿ, ಭಾರತದ ಏಕತೆಯ ಮನೋಭಾವವು ಎಂದಿಗಿಂತಲೂ ಇದೀಗ ಹೆಚ್ಚು ಪ್ರಸ್ತುತವಾಗಿದೆ' ಎಂದಿದ್ದಾರೆ.

'ಸೋಮನಾಥನು ತನ್ನ ಸಕಲ ವೈಭವದಲ್ಲಿ ಎತ್ತರಕ್ಕೆ ನಿಂತಿದ್ದಾನೆ. ಏಕೆಂದರೆ, ಏಕತೆ ಹಾಗೂ ನಾಗರಿಕತೆಯ ಪ್ರಜ್ಞೆಯು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೆಲಸಿದೆ' ಎಂದು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

ದೇಗುಲದ ರಕ್ಷಣೆಗಾಗಿ ಗುಜರಾತ್‌ನಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದವರ ಹೋರಾಟ, ತ್ಯಾಗವನ್ನು ಮರೆಯಲಾಗಲ್ಲ ಎಂದಿದ್ದಾರೆ.

'ಭಾರತೀಯರು ಸೋಮನಾಥನ ದರ್ಶನ ಪಡೆಯಬೇಕು' ಎಂದೂ ಮನವಿ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries