ಮಧೂರು: ಕುಂಬಳೆ ಸೀಮೆಯ ಪ್ರಸಿದ್ಧ ದೇವಾಲಯಗಲಲ್ಲಿ ಒಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಸಂತ ವೇದಪಾಠ ಶೀಬಿರಕ್ಕೆ ಚಾಲನೆ ನೀಡಲಾಯಿತು. ಪ್ರತಿವರ್ಷ ದೇವಾಲಯದಲ್ಲಿ ವಸಂತ ವೇದಪಾಠಶಾಲಾ ಶಿಬಿರ ಆಯೋಜಿಸಲಾಗುತ್ತಿದೆ.
ದೇವಾಲಯದ ಸಹಾಯಕ ಅರ್ಚಕ ಕೃಷ್ಣಮೂರ್ತಿ ಕಲ್ಲೂರಾಯ ಅವರು ವೇದಪಾಠ ಶಿಬಿರ ಉದ್ಘಾಟಿಸಿ ಮಾತನಾಡಿ, ವೇದಗಳ ಅಧ್ಯಯನ ಇಂದಿನ ಕಾಲಘಟ್ಟದ ಅನಿವಾರ್ಯತೆಯಾಗಿರುವುದಗಿ ತಿಳಿಸಿದರು.
ವೇದಿಕೆಯಲ್ಲಿ ನಾರಾಯಣಯ್ಯ ಮಾಸ್ಟರ್, ನರಸಿಂಹ ಮಯ್ಯ, ದೇಗುಲದ ಹಿರಿಯ ಸಿಬ್ಬಂದಿ ಬಿ. ಎನ್ ಸುಬ್ರಮಣ್ಯ, ಕೆ. ಶ್ರೀಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು. ವೇದ ಶಿಬಿರದ ಗುರುಗಳಾದ ಶ್ರೀಕೃಷ್ಣ ಮಯ್ಯ ನಿತ್ಯ ವೇದ ಪಾಠದ ಬಗ್ಗೆ ಮಾಹಿತಿ ನೀಡಿದರು. ಮೇ ತಿಂಗಳ ಕೊನೆಯಲ್ಲಿ ವೇದ ಶಿಬಿರ ಸಂಪನ್ನಗೊಳ್ಳಲಿದೆ.



