ಪೆರ್ಲ: ಮಂಜೇಶ್ವರ ಉದ್ಯಾವರ ಗುತ್ತು ಅಂಗನವಾಡಿ ಶಾಲೆಯಲ್ಲಿ ಕಾರ್ಯಕರ್ತೆಯಾಗಿ ನಿವೃತ್ತರಾದ ಯಶೋಧಾ ಟೀಚರ್ ಅವರಿಗೆ ಕೇಂದ್ರದ ಮಕ್ಕಳ ಪೆÇೀಷಕರು ಹಾಗೂ ಸ್ಥಳೀಯ ನಾಗರಿಕರ ವತಿಯಿಂದ ಸನ್ಮಾನ ಕಾರ್ಯಕ್ರಮ ಜರುಗಿತು.
ಮಂಜೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಫಾತಿಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಜನರ ಬಳಿಗೆ ತಲುಪಿಸುವುದರ ಜತೆಗೆ ಮಕ್ಕಳು, ಗರ್ಭಿಣಿಯರ ಆರೈಕೆ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರ ಕಾಳಜಿ ಮಹತ್ತರವಾದುದು. ಅಂಗನವಾಡಿ ಶಿಕ್ಷಕಿ ಯಶೋಧಾ ಟೀಚರ್ ಅವರಿಗೆ ತಮ್ಮ ಕರ್ತವ್ಯದ ಬಗೆಗಿನ ವಿಶೇಷ ಶ್ರದ್ಧೆ, ಆಸಕ್ತಿ, ಪ್ರಾಮಾಣಿಕತೆ ಶ್ಲಾಘನೀಯವಾದುದು ಎಂದು ತಿಳಿಸಿದರು.
ಸಮಗ್ರ ಶಿಶು ಅಭಿವೃದ್ಧಿ ಸೇವೆ ಯೋಜನೆ (ಐಸಿಡಿಎಸ್) ಮೇಲ್ವಿಚಾರಕಿ ಸುಮತಿ, ನೈನಾರ್ ಅಹಮ್ಮದ್ , ನಾರಾಯಣ ನಾಯ್ಕ್, ನಾರಾಯಣನ್, ರವಿಚಂದ್ರ, ಸುಲೋಚನಾ, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಮಕ್ಕಳ ಪೆÇೀಷಕರು ಉಪಸ್ಥಿತರಿದ್ದರು. ಆಶಾ ಕಾರ್ಯಕರ್ತೆ ಸೀತಾ ಸ್ವಾಗತಿಸಿದರು. ರವಿಚಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



