HEALTH TIPS

ಮೊಗ್ರಾಲ್ ಮಖಾಂ ಉರೂಸ್: ಕ್ಷೇತ್ರಕ್ಕೆ ತಲುಪಿ ಆಮಂತ್ರಣ ನೀಡಿದ ಮಸೀದಿ ಪದಾಧಿಕಾರಿಗಳಿಗೆ ಸ್ವಾಗತ

ಕುಂಬಳೆ: ಮೊಗ್ರಾಲ್ ಮಖಾಂ ಉರೂಸ್ ಬುಧವಾರ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಉರೂಸ್ ಸಮಿತಿ ಪದಾಧಿಕಾರಿಗಳು ಗಾಂಧಿನಗರ ಶ್ರೀ ಕೋಡ್ದಬ್ಬು ದೈವಸ್ಥಾನಕ್ಕೆ ತಲುಪಿ ಕ್ಷೇತ್ರ ಸಮಿತಿ ಪದಾಧಿಕಾರಿಗಳನ್ನು ಉರೂಸ್‍ಗೆ ಆಹ್ವಾನಿಸಿದರು. ಹಲವು ಕಾಲಗಳಿಂದ ಇಲ್ಲಿ ಕಾಯ್ದುಕೊಂಡಿರುವ ಸಾಮರಸ್ಯದ ಸಂಕೇತ ಇದಾಗಿದೆ. ಜಿಲ್ಲೆಯ ವಿವಿಧ ಭಾಗಗಳಿಂದ ಕಾಣಿಕೆ ಸಹಿತ ಜನರು ಒಂದಾಗಿ ಉರೂಸ್‍ಗಾಗಿ ಮಸೀದಿ ಅಂಗಣಕ್ಕೆ ತಲುಪುತ್ತಾರೆ. ಅವರನ್ನು ಉರೂಸ್ ಸಮಿತಿ ಪದಾಧಿಕಾರಿಗಳು ಸ್ವಾಗತಿಸುತ್ತಿದ್ದಾರೆ.

ಕೋಡ್ದಬ್ಬು ದೈವಸ್ಥಾನಕ್ಕೆ ತಲುಪಿದ ಮಸೀದಿ ಸಮಿತಿ ಪದಾಧಿಕಾರಿಗಳಾದ ಹಾದಿ ತಂಙಳ್, ಬಿ.ಎನ್. ಮೊಹಮ್ಮದಲಿ, ಇಬ್ರಾಹಿಂ ಕೊಪ್ಪಳ, ಯು.ಎಂ. ಫಸಲು ರಹ್ಮಾನ್, ಜಲೀಲ್ ಕೊಪ್ಪಳ, ಅಶ್ರಫ್ ಬಿ.ಕೆ., ಮುಸ್ತಫ ಕೊಪ್ಪಳ, ಸಮದ್ ಕಡಪ್ಪುರಂ, ಅಶ್ರಫ್ ಜಡೇಜ ಎಂಬವರನ್ನು ದೈವಸ್ಥಾನ ಸಮಿತಿ ಪದಾಧಿಕಾರಿಗಳಾದ ಶ್ರೀನಿವಾಸ್, ರಮೇಶ್ ಗಾಂಧಿನಗರ್, ಗೋಪಾಲನ್, ಚಿದಾನಂದ, ದಿನೇಶನ್, ಲಕ್ಷ್ಮಣ, ಮಹೇಶ್ ಕುಮಾರ್, ದಿಲೀಪ್ ಕುಮಾರ್, ಸುರೇಶ್, ರಾಮ್‍ದಾಸ್, ಶೈಲೇಶ್, ಪ್ರಭಾಕರನ್, ಉದಯಕುಮಾರ್, ಗೋಪಾಲನ್, ಪ್ರಮೋದ್ ಕುಮಾರ್, ಅನಂತ ಸಹಿತ ಹಲವರು ಸ್ವಾಗತಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries