HEALTH TIPS

ಬಕ್ರೀದ್‌ಗೂ ಮುನ್ನ ಗೋಹತ್ಯೆ ವಿರೋಧಿ ಕಾನೂನು ಜಾರಿಗೊಳಿಸುವಂತೆ ಅರ್ಜಿ: ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಬಕ್ರೀದ್‌ (ಈದ್‌-ಉಲ್‌-ಅಝ್ಹಾ) ಹಬ್ಬಕ್ಕೂ ಮುನ್ನ ದೇಶಾದ್ಯಂತ ಗೋಹತ್ಯೆ ವಿರೋಧಿ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗಳ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ಮಂಗಳವಾರ ನಿರಾಕರಿಸಿತು.

ವಕೀಲ ಬರುಣ್‌ ಕುಮಾರ್‌ ಸಿನ್ಹಾ ಅವರು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್‌ ನೇತೃತ್ವದ ಪೀಠದ ಮುಂದೆ ವಿಷಯವನ್ನು ಮೌಖಿಕವಾಗಿ ಪ್ರಸ್ತಾಪಿಸಿದರು. ಬಕ್ರೀದ್‌ ಮೇ 28ರಂದು ಇರುವುದರಿಂದ ತುರ್ತು ವಿಚಾರಣೆ ನಡೆಸಿ ಮಧ್ಯಂತರ ಆದೇಶ ನೀಡುವಂತೆ ಮನವಿ ಮಾಡಿದರು.

'ಗೋಹತ್ಯೆ ವಿರೋಧಿ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. ನ್ಯಾಯಪೀಠ ಅನುಮತಿಸಿದರೆ ಮಧ್ಯಂತರ ಆದೇಶಕ್ಕಾಗಿ ವಿಚಾರಣೆ ನಡೆಸುವಂತೆ ವಿನಂತಿಸುತ್ತೇವೆ' ಎಂದು ಸಿನ್ಹಾ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್‌, ಅರ್ಜಿಯನ್ನು ಕೊನೆಯ ಕ್ಷಣದಲ್ಲಿ ಸಲ್ಲಿಸಲಾಗಿದೆ ಎಂದು ಹೇಳಿದರು.

'ಇದು ನಿಮಗೆ ಒಂದು ದಿನ ಮೊದಲು ಮಾತ್ರ ನೆನಪಾಯಿತೇ? ಇದರಲ್ಲಿ ಯಾವುದೇ ತುರ್ತು ಇಲ್ಲ' ಎಂದು ಹೇಳಿದ ಅವರು, ಅರ್ಜಿಯನ್ನು ತುರ್ತು ಪಟ್ಟಿಗೆ ಸೇರಿಸಲು ನಿರಾಕರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries