HEALTH TIPS

ಶ್ರೀ ಮಧೂರು ದೇವಾಲಯದಲ್ಲಿ ವಸಂತಪೂಜಾ ಮಹೋತ್ಸವ ಸಂಪನ್ನ

ಮಧೂರು: ಇತಿಹಾಸ ಪ್ರಸಿದ್ಧ ಶ್ರೀ ಮಧೂರು ದೇಗುಲದಲ್ಲಿ ಸುಮರು ಎರಡು ತಿಂಗಳಿಂದ ನಡೆದುಬರುತ್ತಿದ್ದ ವಸಂತ ಪೂಜಾ ಕಾರ್ಯಕ್ರಮ ಸಂಪನ್ನಗೊಂಡಿತು.  ಭಕ್ತ ಜನರ ಸಹಕಾರದೊಂದಿಗೆ ಮಾ. 19ರಂದು ದೇವಸ್ಥಾನದಲ್ಲಿ ವಸಂತ ಪೂಜೆ ಆರಂಭಿಸಲಾಗಿತ್ತು. 


ವಸಂತಪೂಜಾ ಕಾರ್ಯಕ್ರಮದ ಅಂಗವಾಗಿ ಪ್ರತಿ ದಿನ ಸಂಜೆ ಭಜನೆ ಆಯೋಜಿಸಲಾಗಿತ್ತು. ಭಾನುವಾರ ಬೆಳಿಗ್ಗೆ ವಿವಿಧ ತಂಡಗಳ ಭಜನಾ ಕಾರ್ಯಕ್ರಮವನ್ನು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ತಂತ್ರಿ ಗಳಾದ ಬ್ರಹ್ಮಶ್ರೀ ಡಾ. ಶಿವ ಪ್ರಸಾದ್ ತಂತ್ರಿಗಳು ಆಶೀರ್ವಚನ ನೀಡಿದರು. ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಟಿ ರಾಜೇಶ್,  ದೇಗುಲದ  ಪವಿತ್ರ ಪಾಣಿ ರತನ್ ಕುಮಾರ್ ಕಾಮಡ,  ಮಂಜುನಾಥ್ ಕಾಮತ್,  ಉತ್ಸವ ಸಮಿತಿ ಹಾಗೂ ವಸಂತ ಪೂಜೆ ಸಮಿತಿಯ ಕೆ ಜಗದೀಶ್ ಪ್ರಸಾದ್ ಜಗದೀಶ್ ಪ್ರಸಾದ್,  ನಾರಾಯಣಯ್ಯ ಮಾಸ್ಟರ್, ಪ್ರಭಾ ಶಂಕರ ಮಾಸ್ಟರ್ ಮೊದಲಾದವರು ಪಾಲ್ಗೊಂಡಿದ್ದರು.ಕೃಷ್ಣ ಕಾರಂತ ಕಾರ್ಯಕ್ರಮ ನಿರೂಪಿಸಿದರು. 

ಕ್ಷೇತ್ರ ತಂತ್ರಿವರ್ಯ ಡಾ. ಶಿವಪ್ರಸಾದ್ ತಂತ್ರಿಗಳ ನೇತೃತ್ವದಲ್ಲಿ ರಾತ್ರಿ ಶ್ರೀ ದೇವರ ಶಿವೇಲಿ  ಹಾಗೂ ವಸಂತ ಪೂಜೆ ನಡೆಯಿತು. ನೂರಾರು ಸಂಖ್ಯೆ ಯಲ್ಲಿ ಭಕ್ತಜನರು ಪೂಜೆಯಲ್ಲೂ ಬಳಿಕ ಫಲಹಾರ ದಲ್ಲೂ ಪಾಲ್ಗೊಂಡರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries