HEALTH TIPS

ಮಾದಕವಸ್ತು ಸಾಗಾಟದ ಕುಖ್ಯಾತ ಆರೋಪಿ ಬಂಧನ

ಮಂಜೇಶ್ವರ: ಮಾದಕವಸ್ತು ಸಾಗಾಟದ ಕುಖ್ಯಾತ ಆರೋಪಿ, ಮೀಂಜ ಕಳಾಯಿ ಅಡ್ಕ ಕೊಳ್ಚಪ್ಪು ನಿವಾಸಿ ಹುಸೇನ್ ಯಾನೆ ಮುಹ್ಮದ್ ಹುಸೈನ್(32) ಎಂಬಾತನನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಐಆಂಗ ಬಂಧನ ವಿಧಿಸಲಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದ ಸಂದರ್ಭ ಈ ವ್ಯಕ್ತಿಯನ್ನು ವಶಕ್ಕೆ ತೆಗೆದು ವಿಚಾರಿಸಿದಾಗ ಮೂರು ವಾರಂಟು ಹೊಂದಿರುವ ಕುಖ್ಯಾತ ಆರೋಪಿ ಎಂಬುದು ಖಚಿತವಾಗಿತ್ತು. ಈತನನ್ನು ತಪಾಸಣೆಗೊಳಪಡಿಸಿದಾಗ ಎಂಡಿಎಂಎ ಸೇವನೆಯ ಗುಂಗಿನಲ್ಲಿರುವುದು ಪತ್ತೆಯಾಗಿತ್ತು.  ಈತ ಘರ್ಷಣೆ, ಆಕ್ರಮಣ, ಗಾಂಜಾ, ಅಬಕಾರಿ ಪ್ರಕರಣಗಳಲ್ಲೂ ಆರೋಪಿಯಾಗಿದ್ದು, ತಲೆಮರೆಸಿಕೊಂಡು ತಿರುಗಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.   


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries