ಕಾಸರಗೋಡು: ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಂದರ್ಭ ತಮ್ಮದೇ ಶೈಲಿಯಲ್ಲಿ ಸೇವೆಲ್ಲಿಸಿ ಗಮನ ಸೆಳೆದಿದ್ದ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ಎಸ್.ಪಿ.ವೈ.ಎಸ್.ಎಸ್.)ಯ ಮಂಗಳೂರಿನ ಜೆಪ್ಪಿನಮೊಗರು ಶಾಲೆಯ ಕಾರ್ಯಕರ್ತರನ್ನು ವಿಶೇಷವಾಗಿ ಸನ್ಮನಿಸಲಾಯಿತು. ಸಂಸ್ಕಾರ, ಸಂಘಟನೆ, ಸೇವೆಗಳನ್ನು ಮುಖ್ಯ ಭೂಮಿಕೆಯನ್ನಾಗಿಸಿ ದುಡಿಯುವ ಸಂಸ್ಥೆಯ ತರಬೇತಿ ಪಡೆದಿರುವ ಈ ತಂಡ ಕಾಳ್ಯಂಗಾಡು ಕ್ಷೇತ್ರದಲ್ಲಿ ತಮ್ಮ ಯೋಗದಾನ ನಿಡಿದರು. ಮಹಿಳೆಯರು, ಮಕ್ಕಳು ಸೇರಿದಂತೆ 25ಕ್ಕೂ ಹೆಚ್ಚು ಮಂದಿ ತಮ್ಮ ಸಏವೆ ಸಲ್ಲಿಸಿದ್ದರು.


