ಕಾಸರಗೋಡು: ನಗರದ ಅಮೈ ಶ್ರೀಕೃಷ್ಣ ಭಜನಾಮಂದಿರದ ರಜತಮಹೋತ್ಸವ ಸಮರಂಭ ಸಂಪನ್ನಗೊಂಡಿತು. ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಅವರ ವೈದಿಕ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿತು. ಹಿರಿಯ ಧಾರ್ಮಿಕ ಮುಂದಾಳು ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಅವರ ನೇತೃತ್ವದಲ್ಲಿ ಮಂದಿರದ ಅಧ್ಯಕ್ಷ ಗುಣಪಾಲ ಅಮೈ, ಉಪಾಧ್ಯಕ್ಷೆ ಪುಷ್ಪ, ರಜತ ಮಹೋತ್ಸವ ಸಮಿತಿ ಪ್ರಧಾನ ಸಲಹೆಗಾರ ದೇವದಾಸ್ ನುಳ್ಳಿಪ್ಪಾಡಿ, ಸಾಂಸ್ಕೃತಿಕ ಸಮಿತಿ ಸಂಚಾಲಕ ರಾಜೇಶ್ ಅಮೈ, ಅಧ್ಯಕ್ಷ ಕಿಶೋರ್ ನೇತೃತ್ವ ವಹಿಸಿದ್ದರು.
ಈ ಸಂದರ್ಭ ನಡೆದ ಧಾರ್ಮಿಕಸಭೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಮೈತ್ರೇಯ ಗುರುಕುಲದ ಪ್ರತಿನಿಧಿ ಮತ್ತು ರಜತಮಹೋತ್ಸವ ಸಮಿತಿಯ ಗೌರವಧ್ಯಕ್ಷ ಜಗನ್ನಾಥ ವಿಟ್ಲ ಅಧ್ಯಕ್ಷತೆ ವಹಿಸಿದ್ದರು. ಹಿಂದೂ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಶೆಟ್ಟಿ ಕಾರ್ಕಳ ಧಾರ್ಮಿಕ ಭಾಷಣ ಮಾಡಿದರು. ಕಾಸರಗೋಡು ಯುನೈಟೆಡ್ ಮೆಡಿಕಲ್ ಸೆಂಟರ್‍ನ ಡಾ.ವೀಣಾ ಮಂಜುನಾಥ್, ಕೊಲ್ಯ ಶ್ರೀ ದೇವಿ ಮೂಕಾಂಬಿಕಾ ದೇವಸ್ಥಾನದ ಟ್ರಸ್ಟಿ ಮಧುಸೂದನ ಅಯರ್, ನಿವೃತ್ತ ಎಸ್ಪಿ ಹರಿಶ್ಚಂದ್ರ ನಾಯ್ಕ್ ಅತಿಥಿಗಳಾಗಿ ಭಾಗವಹಿಸಿದ್ದರು.
ಮಂದಿರ ಸ್ಥಾಪನೆ ಹಾಗೂ ಅಭಿವೃದ್ಧಿಯಲ್ಲಿ ದೊಡ್ಡ ಯೋಗದಾನ ನೀಡಿದ ಕುಟುಂಬಗಳ ಪ್ರತಿನಿಧಿಗಳಾದ ಮತ್ತು ಸಾಧಕರಾದ ನಾರಾಯಣ ಅಮೈ, ಗಂಗಾಧರ ಅಮೈ, ಲಲಿತಾ ಅಮೈ, ಪದ್ಮಾವತಿ ಅಮೈ ಅವರಿಗೆ ಗೌರವಾರ್ಪಣೆ ನಡೆಯಿತು. ಮಂದಿರದ ಅಧ್ಯಕ್ಷ ಗುಣಪಾಲ ಅಮೈ, ಉಪಾಧ್ಯಕ್ಷೆ ಪುಷ್ಪ ಮೊದಲಾದವರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ರಾಜೇಶ್ ಅಮೈ ಸ್ವಾಗತಿಸಿದರು. ರಜತ ಮಹೋತ್ಸವ ಸಮಿತಿ ಪ್ರಧಾನ ಸಲಹೆಗಾರ ದೇವದಾಸ್ ನುಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ವಂದಿಸಿದರು.



